alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಭೀರತೆ ಅರಿತುಕೊಳ್ಳಿ…! ಸ್ಪೇನ್ ನಲ್ಲಿ ಒಂದೇ ದಿನ 718 ಸಾವು

कोरोना की चपेट में पूरी दुनिया

ಕೊರೊನಾ ಸೋಂಕು ವಿಶ್ವದಾದ್ಯಂತ ಹೆಣದ ರಾಶಿ ಬೀಳಲು ಕಾರಣವಾಗಿದೆ. ವಿಶ್ವದಾದ್ಯಂತ 5,32,909 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದರೆ  24,093 ಜನರು ಸಾವನ್ನಪ್ಪಿದ್ದಾರೆ. ಇಟಲಿ, ಸ್ಪೇನ್ ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಾಗ್ತಿದೆ. ಸ್ಪೇನ್ ನಲ್ಲಿ ಗುರುವಾರ ಒಂದೇ 718 ಮಂದಿ ಸಾವನ್ನಪ್ಪಿದ್ದಾರೆ.

ವುಹಾನ್‌ನಿಂದ ಹರಡಿದ ಕೊರೊನಾ ವೈರಸ್‌ನ ಅತಿ ಹೆಚ್ಚು ಸೋಂಕು ಇಟಲಿಯಲ್ಲಿ ಕಂಡು ಬರುತ್ತಿದೆ. ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಇಟಲಿಯಲ್ಲಿ 683 ಜನರು ಸಾವನ್ನಪ್ಪಿದ್ದಾರೆ. ಕೊರೊನಾ ವೈರಸ್‌ನಿಂದ ಇಟಲಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 8,215 ಕ್ಕೆ ತಲುಪಿದೆ. ಚೀನಾದ ಹೊರಗೆ ಕೊರೊನಾ ವೈರಸ್‌ನಿಂದ ಹೆಚ್ಚಿನ ಸಾವುಗಳು ಇಟಲಿಯಲ್ಲಿ ಸಂಭವಿಸಿವೆ. ಇದರೊಂದಿಗೆ 6,203 ಹೊಸ ಪ್ರಕರಣಗಳು ದೃಢಪಟ್ಟಿವೆ.

ಸ್ಪೇನ್  ಕೊರೊನಾ ಸೋಂಕಿನ ಕೇಂದ್ರವಾಗಿದೆ. ಸ್ಪೇನ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 718 ಜನರು ಸಾವನ್ನಪ್ಪಿದ್ದಾರೆ. ಇಲ್ಲಿ ಸಾವನ್ನಪ್ಪಿದವರ ಸಂಖ್ಯೆ 4,365 ಕ್ಕೆ ತಲುಪಿದೆ. ಸ್ಪೇನ್‌ನಲ್ಲಿ ಈವರೆಗೆ ಒಟ್ಟು 57,786 ಜನರು ಸೋಂಕಿಗೆ ಒಳಗಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...