alex Certify 13 ನೇ ವಯಸ್ಸಿಗೇ 4 ಪದವಿ ಪಡೆದ ಬಾಲಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

13 ನೇ ವಯಸ್ಸಿಗೇ 4 ಪದವಿ ಪಡೆದ ಬಾಲಕ…!

ಕ್ಯಾಲಿಫೋರ್ನಿಯಾ: ಒಬ್ಬ ಎರಡು ವರ್ಷದಲ್ಲಿ ಎಷ್ಟು ಪದವಿ ಪಡೆಯಬಹುದು. ಒಂದೂ ಸಾಧ್ಯವಿಲ್ಲ ಎಂದು ನಾವು ಹೇಳುತ್ತೇವೆ.

ಆದರೆ, ಇಲ್ಲೊಬ್ಬ ನಾಲ್ಕು ವಿಷಯದಲ್ಲಿ ಪದವಿ ಪಡೆದಿದ್ದಾನೆ‌. ಆತನೇನೂ ಮಧ್ಯವಯಸ್ಕನಲ್ಲ. 13 ವರ್ಷದ ಬಾಲಕ.
ಅಚ್ಚರಿಯಾದರೂ ಸತ್ಯ. ಕ್ಯಾಲಿಫೋರ್ನಿಯಾದ 13 ವರ್ಷದ ಜಾಕ್ ರಿಕೋ ಫುಲರ್ಟನ್ ಕಾಲೇಜ್ ನಲ್ಲಿ ಓದಿ ವಿಶ್ವದ ಅತಿ‌ ಚಿಕ್ಕ ವಯಸ್ಸಿನ ಪದವೀಧರ ಎನಿಸಿಕೊಂಡಿದ್ದಾನೆ.

ಅದೂ ಸುಲಭದ ವಿಷಯಗಳಲ್ಲೂ ಅಲ್ಲ. ಇತಿಹಾಸ, ಮಾನವ ಅಭಿವ್ಯಕ್ತಿ, ಸಾಮಾಜಿಕ ನಡುವಳಿಕೆ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಓದಿ.‌ ಸರಿಯಾಗಿ ಜಿಪಿಎ ಸ್ಕೋರ್ ಮಾಡಿದ್ದಾನೆ. ಮಾಧ್ಯಮವೊಂದರ ಜತೆ ಮಾತನಾಡುತ್ತ ಜಾಕ್ “ನಾನು ಓದುವುದನ್ನು ಇಷ್ಟಪಡುತ್ತೇ‌ನೆ. ಜಗತ್ತಿನ ಬಗ್ಗೆ ಇನ್ನಷ್ಟು ತಿಳಿಯುವ ಇಚ್ಛೆ ಇದೆ” ಎಂದಿದ್ದಾನೆ.

ಕಾಲೇಜು ಆಡಳಿತ ಕೂಡ ಇಂಥ ಮೇಧಾವಿ ವಿದ್ಯಾರ್ಥಿಗೆ‌ ಪದವಿ‌ ನೀಡಲು ಖುಷಿಪಟ್ಟಿದೆ. ಕೋವಿಡ್ 19 ಕಾರಣ ಪದವಿ ಪ್ರಧಾನ ಸಮಾರಂಭ ನಡೆದಿಲ್ಲ.

ಕಾಲೇಜ್ ತನ್ನ ಟ್ವಿಟರ್ ಖಾತೆಯಲ್ಲಿ ರಿಕೊ ಆತನ ಕುಟುಂಬದ ಜತೆ ಇರುವ ಫೋಟೋ ಹಾಕಿ ಶ್ಲಾಘಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...