alex Certify ಮನೆಯ ಮುಂದೇ ಸಿಂಹ ನೋಡಿ ಬೆಚ್ಚಿ ಬಿದ್ದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಮುಂದೇ ಸಿಂಹ ನೋಡಿ ಬೆಚ್ಚಿ ಬಿದ್ದ

ಪೆಸಿಪಿಕಾ: ಮನೆಯೊಂದರ ಎದುರಿನ ಗಾರ್ಡನ್ ನಲ್ಲಿ ಸಿಂಹವೊಂದು ಓಡಾಡಿದ ಕ್ಯಾಮರಾದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ಯಾಲಿಫೋರ್ನಿಯಾದ ಪೆಸಿಪಿಕಾ ಪ್ರದೇಶದಲ್ಲಿ ಘಟನೆ ನಡೆದಿದೆ.‌

ತಿಮೊತಿ ಕೆರಿಸ್ಕ್ ಎಂಬಾತ ತನ್ನ ಮನೆಯ ಎದುರೇ ಈ ವಿಡಿಯೋ ಸೆರೆ ಹಿಡಿದಿದ್ದಾನೆ. ಅಚ್ಚರಿ ಎಂದರೆ ಮನೆಯಾಚೆಗಿನ ರಸ್ತೆಯಲ್ಲಿ ಮಕ್ಕಳು ಆಡುತ್ತಿದ್ದಾರೆ. ಮನೆ ಹಾಗೂ ರಸ್ತೆಯ ನಡುವಿನ ಪ್ರದೇಶದಲ್ಲಿ ಸಿಂಹವು ಆಡುತ್ತಿರುವ ಮಕ್ಕಳನ್ನು ನೋಡುತ್ತ ಸುಮ್ಮನೆ ಕುಳಿತಿದೆ.‌

ಕೆಲ ಹೊತ್ತಿನ ಬಳಿಕ ಸಿಂಹ ಕ್ಯಾಮರಾಕ್ಕೆ‌ ಮುಖ ಮಾಡಿ ಬಂದು ನೋಡಿ ನಂತರ ಪಕ್ಕದಲ್ಲಿ ಹೊರಟು ಹೋಗುತ್ತದೆ. ವಿಡಿಯೋವನ್ನು ಯೂಟ್ಯುಬ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ. “ಗುಡ್ಡದ ಸಿಂಹ ಪೆಸಿಪಿಕಾದಲ್ಲಿ 19-9-29 ಸಂಜೆ‌ 7:14 ಎಂದು ಕ್ಯಾಪ್ಶನ್ ನೀಡಲಾಗಿದೆ. ವಿಡಿಯೋ 10 ಲಕ್ಷ ವೀಕ್ಷಣೆ ಪಡೆದಿದೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...