alex Certify ದಂಗಾಗಿಸುತ್ತೆ ಈ ಹಾವಿನ ಬಣ್ಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಈ ಹಾವಿನ ಬಣ್ಣ….!

ಈ ಪ್ರಕೃತಿಯೇ ಒಂದು ದೊಡ್ಡ ಕಲರ್‌ಫುಲ್ ಥಿಯೇಟರ್‌ ನೋಡಿ. ನೀಲಿ ಬಣ್ಣದ ಹಾವೊಂದು ಕೆಂಪು ಗುಲಾಬಿಗೆ ಸುತ್ತಿಕೊಂಡಿರುವ ವಿಡಿಯೋವೊಂದು ಸದ್ದು ಮಾಡುತ್ತಿದೆ.

12 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ, ಬಿಳಿ ತುಟಿಗಳಿರುವ ನೀಲಿ ಬಣ್ಣದ ಪಿಟ್ ವೈಪರ್‌ (ಮಂಡಲದ ಹಾವು) ಇಂಡೋನೇಷ್ಯಾ ಹಾಗೂ ಈಸ್ಟ್‌ ಟೈಮಾರ್‌ ದ್ವೀಪಗಳಲ್ಲಿ ಕಂಡುಬರುತ್ತದೆ. ಈ ಜಾತಿಯ ಹಾವುಗಳು ವಿಷಪೂರಿತವಿದ್ದು, ಬಹಳ ಆಕ್ರಮಣಕಾರಿ ಮನಸ್ಥಿತಿಯುಳ್ಳವಾಗಿವೆ.

ಈ ಹಾವುಗಳ ಒಂದು ಕಡಿತದಿಂದ ಭಾರೀ ನೋವು, ಊತ, ಮಾಂಸ ಕೊಳೆಯುವುದು, ತೀವ್ರ ರಕ್ತ ಸ್ರಾವ ಸಂಭವಿಸಿ ಕಚ್ಚಿಸಿಕೊಂಡ ವ್ಯಕ್ತಿ ಬಹಳ ಗಂಭೀರ ಪರಿಸ್ಥಿತಿ ತಲುಪುವ ಸಾಧ್ಯತೆಗಳು ಬಹಳಷ್ಟಿದೆ. ಈ ಹಾವುಗಳು ತಮ್ಮ ಉದ್ದುದ್ದ ಹಲ್ಲುಗಳನ್ನು ಬಳಸಿಕೊಂಡು ತಮ್ಮ ಬೇಟೆಯನ್ನು ಸಲೀಸಾಗಿ ನುಂಗಿಬಿಡಬಲ್ಲವು.

ಈ ಜಾತಿಯ ಹಾವುಗಳ ಬಗ್ಗೆ ಆಸಕ್ತಿಕರ ವಿಷಯವೊಂದಿದೆ: ನೀಲಿ ಬಣ್ಣದ ಪಿಟ್‌ ವೈಪರ್‌ಗಳ ಜೋಡಿಯು ಹಸಿರು ಬಣ್ಣದ ಮರಿಗಳಿಗೆ ಜನ್ಮ ನೀಡಬಲ್ಲದಾಗಿದ್ದು, ಆ ಮರಿಗಳು ಹುಟ್ಟುತ್ತಲೇ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...