alex Certify ನಿರಂತರವಾಗಿ ಇಯರ್ ಫೋನ್ ಬಳಸುವವರನ್ನು ಬೆಚ್ಚಿಬೀಳಿಸುತ್ತೆ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರಂತರವಾಗಿ ಇಯರ್ ಫೋನ್ ಬಳಸುವವರನ್ನು ಬೆಚ್ಚಿಬೀಳಿಸುತ್ತೆ ಈ ಸುದ್ದಿ

ಬೀಜಿಂಗ್: ಇಯರ್ ಫೋನ್ ಅತಿಯಾಗಿ ಬಳಸುತ್ತಿರುವವರಿಗೆ ಆತಂಕಕಾರಿ ಸುದ್ದಿ ಇಲ್ಲಿದೆ.‌ ಬೀಜಿಂಗ್ ನಗರದ 10 ವರ್ಷದ ಬಾಲಕನ ಕಿವಿಯಲ್ಲಿ ಬ್ಲ್ಯಾಕ್ ಫಾರೆಸ್ಟ್ ಫಂಗಸ್ ಬೆಳೆದಿದ್ದು ತಜ್ಞರು ಅದನ್ನು ಹೊರತೆಗೆದಿದ್ದಾರೆ. ಅದರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ.

ಬಾಲಕ ಇಯರ್ ಫೋನ್ ಅತಿಯಾಗಿ ಬಳಸುತ್ತಿದ್ದ. ಕಳೆದ ತಿಂಗಳು ಆತನ ಕಿವಿಯಲ್ಲಿ ತೊಂದರೆ ಶುರುವಾಯಿತು. ಇಯರ್ ಫೋನ್ ಬಳಕೆಯಿಂದ‌ ಕಿವಿಯಲ್ಲಿ ಉಂಟಾಗುವ ಬಿಸಿ ಗಾಳಿ,‌ ಆರ್ದತೆಯನ್ನು ಸೃಷ್ಟಿಸುತ್ತದೆ. ಇದರಿಂದ ಫಂಗಸ್ ಬೆಳೆಯಲು ಅನುಕೂಲವಾಗುತ್ತದೆ. ನಮ್ಮ ಕೈಯಿಂದ ಬ್ಯಾಕ್ಟೀರಿಯಾ ಬೀಜಕಗಳು ಕಿವಿಗೆ ಹೋಗುತ್ತವೆ ಎಂದಿದ್ದಾರೆ. ಬ್ಯಾಕ್ಟೀರಿಯಾ ನಿರೋಧಕ ಮಾತ್ರೆ ನೀಡಿದ್ದರಿಂದ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವಿವರಿಸಿದ್ದಾರೆ.

ಇದೊಂದು ಉದಾಹರಣೆ ಮಾತ್ರ. ಇಯರ್ ಫೋನ್, ಹೆಡ್ ಫೋನ್ ಗಳನ್ನು ಹೆಚ್ಚು ಹೊತ್ತು ದೊಡ್ಡ ಶಬ್ದದೊಂದಿಗೆ ಬಳಕೆಯಿಂದ‌ ಕಿವಿಯ ತಮಟೆಗೆ ತೊಂದರೆಯಾಗಬಹುದು. ತಲೆ ತಿರುಗುವ, ವಾಂತಿ ಬರುವ ಲಕ್ಷಣ ಕಾಣಬಹುದು.

ಒಬ್ಬರು ಬಳಸಿದ ಫೋನನ್ನು ಇನ್ನೊಬ್ಬರು ಬಳಸುವುದರಿಂದ ಕಿವಿಯ ಸೋಂಕುಗಳು ಹರಡಬಹುದು. ಬ್ಲೂಟೂತ್, ವೈಫೈ ಇರುವ ವಯರ್ ಲೆಸ್ ಇಯರ್ ಫೋನ್ ಬಳಕೆಯಿಂದ
ರೇಡಿಯೇಶನ್ ಪ್ರಭಾವವಾಗಿ ಜೈವಿಕ ಪರಿಣಾಮ ಉಂಟಾಗಬಹುದು ಎಂದು ಹಲವು ಸಂಶೋಧನೆಗಳು ಹೇಳಿವೆ. ವಿಶ್ವದ ಹಲ ತಜ್ಞ ವೈದ್ಯರು ಎಚ್ಚರಿಕೆ ನೀಡುತ್ತಲೇ ಇದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...