alex Certify ಈ ಶ್ವಾನಕ್ಕೆ ಬೈಕ್ ಸವಾರಿ ಅಂದರೆ ಬಲು ಪ್ರೀತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಶ್ವಾನಕ್ಕೆ ಬೈಕ್ ಸವಾರಿ ಅಂದರೆ ಬಲು ಪ್ರೀತಿ…!

ಕಪ್ಪು ಸ್ಪೋರ್ಟ್ಸ್ ಜಾಕೆಟ್, ಏವಿಯೇಟರ್‌ ಸನ್ ಗ್ಲಾಸ್‌, ಕಿತ್ತಳೆ ಬಣ್ಣದ ಹೆಲ್ಮೆಟ್ ಧರಿಸಿಕೊಂಡು ಯಾವಾಗಲೂ ಮಿಂಚುತ್ತಲೇ ಇರುವ ಬೋಗಿ ಬಲೇ ಸಾಹಸಿ ನಾಯಿ. ಈತ ಯಾವಾಗಲೂ ಮೋಟರ್ ‌ಸೈಕಲಿಸ್ಟ್‌ಗಳ ಗ್ಯಾಂಗ್‌ ಒಂದರ ಜೊತೆಯಲ್ಲಿಯೇ ಇರುತ್ತಾನೆ.

ಫಿಲಿಪ್ಪೀನ್ಸ್‌ನ ಈ 11 ವರ್ಷದ ಶ್ವಾನ ತನ್ನ ಮಾಲೀಕ ಗಿಲ್ಬರ್ಟ್ ಡೆಲೋಸ್ ರೇಯಸ್ ಜೊತೆಗೆ ಮೋಟರ್‌ ಸೈಕಲ್ ಸವಾರಿ ಮಾಡುತ್ತಾನೆ. ಬೈಕ್ ಸೀಟಿನ ಮುಂತುದಿ ಹಾಗೂ ‌ಹ್ಯಾಂಡಲ್‌ಗಳ ಮೇಲೆ ತನ್ನ ಕಾಲುಗಳನ್ನು ಇಟ್ಟುಕೊಳ್ಳುವ ಬೋಗಿ, ಬಲೇ ಕೂಲಾಗಿ ಬೈಕ್ ಸವಾರಿಯ ಮಜಾ ತೆಗೆದುಕೊಳ್ಳುತ್ತಾನೆ.

“ಬೋಗಿ ನಾಲ್ಕು ತಿಂಗಳ ಮರಿಯಾಗಿದ್ದಾಗಲೇ ಅವನಿಗೆ ಮೋಟರ್‌ ಸೈಕಲ್ ಸವಾರಿ ಮಾಡುವ ಅಭ್ಯಾಸ ಮಾಡಿಸಿದೆ. ನಾನು ಎಲ್ಲೇ ಹೋದರೂ ಅವನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೆ. ಹೀಗೇ ಆದಾಗ ನಾನು ಮನೆಯಿಂದ ಹೊರಗೆ ಹೋಗುವಾಗೆಲ್ಲಾ ಅವನು ನನ್ನ ಫಾಲೋ ಮಾಡಲು ಶುರುವಿಟ್ಟುಕೊಂಡ. ನಾನು ಇಂಜಿನ್ ಸ್ಟಾರ್ಟ್ ಮಾಡುತ್ತಲೇ ಅವನು ಬಂದು ನನ್ನ ಬೈಕ್ ಮೇಲೆ ಜಂಪ್ ಮಾಡಿ ಕುಳಿತು ಬಿಡುತ್ತಾನೆ” ಎಂದು ಹೇಳುತ್ತಾರೆ ರೆಯಸ್.

ರೆಯೆಸ್ ಅಂಗಡಿಗೆ ಬರುವ ಗ್ರಾಹರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಬೋಗಿ, ಅವರೊಂದಿಗೆ ಹ್ಯಾಂಡ್ ಶೇಕ್‌ ಎಲ್ಲಾ ಮಾಡುತ್ತಾನೆ. ಒಮ್ಮೆ ತನ್ನ ಮಾಲೀಕನ ಚಿನ್ನದ ಸರವನ್ನು ಕದ್ದು ಓಡುತ್ತಿದ್ದ ಕಳ್ಳನನ್ನು ಚೇಸ್ ಮಾಡಿದ ಬೋಗಿ, ಈ ಕಳ್ಳತನವನ್ನು ತಪ್ಪಿಸಿದ್ದ ನಿಯತ್ತಿನ ನಾಯಿ. ಆತ ತನ್ನ ಮಗನಂತೆ ಎಂದು ಭಾರೀ ಪ್ರೀತಿಯಿಂದ ಹೇಳುತ್ತಾರೆ ರೆಯಸ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...