alex Certify BIG NEWS: ಸಿದ್ಧವಾಗಿದ್ಯಾ ಕೊರೊನಾ ಲಸಿಕೆ…? ಸೂಚನೆ ನೀಡಿದ ಅಮೆರಿಕಾ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿದ್ಧವಾಗಿದ್ಯಾ ಕೊರೊನಾ ಲಸಿಕೆ…? ಸೂಚನೆ ನೀಡಿದ ಅಮೆರಿಕಾ ಕಂಪನಿ

ಅಮೆರಿಕಾದ ಜೈವಿಕ ತಂತ್ರಜ್ಞಾನ ಕಂಪನಿಯು ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್ ಔಷಧಿಯನ್ನು ಮಾನವರ ಮೇಲೆ ಪರೀಕ್ಷಿಸಲು ಪ್ರಾರಂಭಿಸಿದೆ. ಈ ವರ್ಷ ಈ ರೋಗಕ್ಕೆ ಔಷಧಿ ಬರಲಿದೆ ಎಂದು ಕಂಪನಿ ಭರವಸೆ ವ್ಯಕ್ತಪಡಿಸಿದೆ. ಕಂಪನಿಯು ಮೊದಲ ಹಂತದ ಪರೀಕ್ಷೆಯನ್ನು ಪ್ರಾರಂಭಿಸಿದೆ ಎಂದು ಜೈವಿಕ ತಂತ್ರಜ್ಞಾನ ಕಂಪನಿ ನೋವಾವಾಕ್ಸ್ ಮುಖ್ಯಸ್ಥರು ಹೇಳಿದ್ದಾರೆ. 131 ಸ್ವಯಂ ಸೇವಕರ ಮೇಲೆ  ಔಷಧಿ ಪರೀಕ್ಷೆಗಳನ್ನು ನಡೆಸಲಾಗುವುದು.

ಔಷಧಗಳು ಮತ್ತು ಲಸಿಕೆಗಳನ್ನು ತಯಾರಿಸುತ್ತಿದ್ದೇವೆ. ಇದು ಪರಿಣಾಮಕಾರಿಯಾಗುವ ಸಾಧ್ಯತೆಯಿದೆ. ವರ್ಷದ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ. ಚೀನಾ, ಅಮೆರಿಕ ಮತ್ತು ಯುರೋಪ್‌ನಲ್ಲಿ ಸುಮಾರು ಒಂದು ಡಜನ್ ಪ್ರಾಯೋಗಿಕ ಔಷಧಗಳ ಪರೀಕ್ಷೆ ಆರಂಭಿಕ ಹಂತದಲ್ಲಿವೆ.

ಕೊರೊನಾ ವೈರಸ್ ಗೆ ಈವರೆಗೆ ಯಾವುದೇ ಔಷಧಿ, ಲಸಿಕೆ ಸಿಕ್ಕಿಲ್ಲ. ಎಲ್ಲ ದೇಶಗಳಲ್ಲಿ ಪ್ರಯೋಗ ನಿರಂತರವಾಗಿ ನಡೆಯುತ್ತಿದೆ. ಕೊರೊನಾ ಸೋಂಕು, ಸಾವು ಹೆಚ್ಚಾಗ್ತಿರುವ ಕಾರಣ ಬೇಗ ಲಸಿಕೆ ಬರಲೆಂದು ಜನರು ಬೇಡ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...