alex Certify ರಸ್ತೆ ಮಧ್ಯೆ ನಿಲ್ಲಿಸಿದ್ದ ಕಾರಿನ ಡೋರ್‌ ತೆಗೆದ ಕರಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮಧ್ಯೆ ನಿಲ್ಲಿಸಿದ್ದ ಕಾರಿನ ಡೋರ್‌ ತೆಗೆದ ಕರಡಿ…!

ಕಾಡಿನ ಹಾದಿಯಲ್ಲಿ ಪ್ರಾಣಿಗಳು ವಾಹನಗಳನ್ನು ಅಡ್ಡಗಟ್ಟುವುದು, ವಾಹನದೊಳಗೆ ಪ್ರವೇಶಿಸಲು ಪ್ರಯತ್ನಿಸುವ ವಿಡಿಯೋಗಳು ಇತ್ತೀಚೆಗೆ ಸಾಕಷ್ಟು ಹರಿದಾಡಿವೆ. ಇದೇ ಸರಣಿಯಲ್ಲಿ ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಕಾಡಿನ ಅಂಕುಡೊಂಕಾದ ಹಾದಿಯಲ್ಲಿ ನಿಲ್ಲಿಸಿದ್ದ ಕಾರಿನತ್ತ ಬರುವ ಕರಡಿಯೊಂದು ಕಾರಿನ ಮುಂಬಾಗಿಲನ್ನು ಅನ್ ಲಾಕ್ ಮಾಡುವ ಅಚ್ಚರಿಯನ್ನು ವಿಡಿಯೋದಲ್ಲಿ ವೀಕ್ಷಿಸಬಹುದು.

ಇದೇ‌ ವೇಳೆ ಕಾರಿನಿಂದ ದೂರದಲ್ಲಿ ಕುಳಿತಿರುವ ಅದರ ಮಾಲಿಕ ಮತ್ತು ಇತರರು ಕರಡಿಯ ವರ್ತನೆಯನ್ನು ವಿಡಿಯೋ ಮಾಡಿಕೊಳ್ಳುವ ಜತೆಗೆ ಅದನ್ನು ನೋಡಿ ಗಾಬರಿಯಿಂದ ಕಿರುಚಿಕೊಳ್ಳುತ್ತಾರೆ. ಚೀರಾಟಕ್ಕೆ ಬೆದರಿದ ಕರಡಿ ಹಾಗೆ ಅಲ್ಲಿಂದ ಕಾಡಿನೊಳಗೆ ಓಡಿಬಿಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...