alex Certify ದಂಗಾಗಿಸುವಂತಿದೆ‌ 71 ವರ್ಷದ ವೃದ್ದೆ ʼಫಿಟ್ನೆಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ‌ 71 ವರ್ಷದ ವೃದ್ದೆ ʼಫಿಟ್ನೆಸ್ʼ

ಸಾಮಾನ್ಯವಾಗಿ ಎಲ್ಲರಿಗೂ ವಯಸ್ಸು ಹೇಳಿಕೊಳ್ಳುವುದಕ್ಕೆ ಸಂಕೋಚ. ಅದರಲ್ಲೂ ಭಾರತೀಯರಿಗಂತೂ ಈ ವಿಚಾರದಲ್ಲಿ ಮಡಿವಂತಿಕೆ ಹೆಚ್ಚು ಎಂದೇ ಹೇಳಬಹುದು.

ಜನರು ಕಣ್ಣಲ್ಲೇ ಎದುರಿನ ವ್ಯಕ್ತಿಯ ವಯಸ್ಸನ್ನು ಅಳೆಯುವ ಒಂದು ಸಾಮಾನ್ಯ ಚಟವು ಇದೆ ಅಂತದ್ದರಲ್ಲಿ ವಯಸ್ಸಿಗೆ ಸಂಬಂಧವಿಲ್ಲ ಅಥವಾ ಹೊಂದಾಣಿಕೆಯಾಗದಂತೆ ಸಾಧನೆ ಮಾಡಿದಾಗ ನಿಬ್ಬೆರಗಾಗುತ್ತಾರೆ. ಇಂಥದ್ದೇ ಒಂದು ಸುದ್ದಿ ಅಮೆರಿಕಾ ಫ್ಲೋರಿಡಾದಿಂದ ಬಂದಿದೆ.

71 ವರ್ಷದ ಡಿಸೈನರ್ ವೇರಾವಾಂಗ್ ಬೇಸಿಗೆ ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದು, ಅವರನ್ನು ಕಂಡ ನೆಟ್ಟಿಗರು ದಂಗಾಗಿದ್ದಾರೆ. ವರ್ಷ 70 ದಾಟಿದೆ, ಹಣ್ಣುಹಣ್ಣು ಮುದುಕಿ ಎಂದು ಕೊಂಡರೆ ತಪ್ಪು. ಆಕೆಯ ಮೈಕಟ್ಟು ನೋಡಿದರೆ 20-21ರಂತೆ ತೋರುತ್ತದೆ.

ಸಾಂಕ್ರಾಮಿಕ ರೋಗ ಹರಡುತ್ತಿರುವ ಕಾರಣ ಆಕೆ ಜಾಲತಾಣದ ಮೂಲಕ‌ವೇ ತಮ್ಮ ಬೇಸಿಗೆ ಉಡುಪು ರಚನೆಯನ್ನು ಪ್ರದರ್ಶಿಸಿದ್ದಾರೆ. ಆರೆಂಜ್ ಬಣ್ಣದ ಕ್ರಾಪ್ ಟಾಪ್ ಹಾಗೂ ಜಾಕೆಟ್ ತೊಟ್ಟ ಫೋಟೋ ಸೇರಿದಂತೆ ವಿವಿಧ ಉಡುಪು ತೊಟ್ಟ ಫೋಟೋದೊಂದಿಗೆ ಅವರು ಕಾಣಿಸಿಕೊಂಡಿದ್ದಾರೆ. ಫೋಟೋ ನೋಡಿದ ಜನರಿಗೆ ಆಕೆ ಹಾಕಿಕೊಂಡ ಡ್ರೆಸ್ ಬಗ್ಗೆ ಗಮನ ಕೊಡದೇ, ಆಕೆಯ ದೇಹದ ಮೈಕಟ್ಟಿನ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ನಾವು ಇದೇ ರೀತಿ ಆಗಬೇಕು, 70ರಲ್ಲೂ ಈ ಮೈಕಟ್ಟಿನ ಗುಟ್ಟೇನು ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

View this post on Instagram

Cocktail hour….. puffer on the patio.

A post shared by Vera Wang (@verawang) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...