alex Certify ಕೊರೊನಾ ಗೆದ್ದ 2ನೇ ವಿಶ್ವ ಯುದ್ಧದಲ್ಲಿ ಭಾಗವಹಿಸಿದ್ದ 100 ವರ್ಷದ ಹಿರಿಯಜ್ಜ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಗೆದ್ದ 2ನೇ ವಿಶ್ವ ಯುದ್ಧದಲ್ಲಿ ಭಾಗವಹಿಸಿದ್ದ 100 ವರ್ಷದ ಹಿರಿಯಜ್ಜ

ವರ್ಜಿನಿಯಾ: ಎರಡನೇ ವಿಶ್ವ ಸಮರ‌‌ ಸೇನಾನಿ ಅಮೇರಿಕಾ‌ ವರ್ಜಿನಿಯಾ ರಿಚ್ಮಂಡ್ ನ 100 ವರ್ಷದ‌ ಹಿರಿಯಜ್ಜ ಕೋವಿಡ್‌-19 ಗೆದ್ದಿದ್ದಾರೆ.

ಲಾಯಲ್ಡ್ ಫಾಕ್ ಹೆಸರಿನ ವೃದ್ಧ ಮಾರ್ಚ್‌ 24 ರಂದು‌ ಹೆನ್ರಿಕೊ ಡಾಕ್ಟರ್ಸ್ ಆಸ್ಪತ್ರೆಯ ಮೊದಲ ಕರೋನಾ ವೈರಸ್ ರೋಗಿಯಾಗಿ ದಾಖಲಾಗಿದ್ದರು. 58 ದಿನಗಳ ನಿರಂತರ ಚಿಕಿತ್ಸೆಯ ಬಳಿಕ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ, ಇದೇ ಆಸ್ಪತ್ರೆಗೆ ದಾಖಲಾಗಿದ್ದ ಅವರ 74 ವರ್ಷ ವಯಸ್ಸಿನ ಪತ್ನಿ ವಾರದ ಹಿಂದೆ ಕೊನೆಯುಸಿರೆಳೆದಿದ್ದರು.‌

ಆಸ್ಪತ್ರೆಯ ಸಿಬ್ಬಂದಿ ಸೋಮವಾರ ಮಿ.ಫಾಕ್‌ ಅವರಿಗೆ ಕ್ಯಾಪ್ ತೊಡಿಸಿ, ಚಪ್ಪಾಳೆ ತಟ್ಟಿ, ಗೌರವ ಸಲ್ಲಿಸಿ ಆಸ್ಪತ್ರೆಯಿಂದ ಬೀಳ್ಕೊಟ್ಟರು. ಅವರ ಮೃತ ಪತ್ನಿಯ ಆತ್ಮಕ್ಕೆ ಶಾಂತಿ ಕೋರಿದರು.

ಫಾಕ್‌ ಆಸ್ಪತ್ರೆಗೆ ಅಭಿನಂದನೆ ಸಲ್ಲಿಸುತ್ತಿರುವ ಹಾಗೂ ಆಸ್ಪತ್ರೆಯಿಂದ ತೆರಳುತ್ತಿರುವ ವಿಡಿಯೋವನ್ನು ಆಸ್ಪತ್ರೆ ತನ್ನ ಅಧಿಕೃತ‌ ಫೇಸ್ ಬುಕ್ ಪೇಜ್ ನಲ್ಲಿ ಅಪ್ ಲೋಡ್ ಮಾಡಿದೆ.

100-year-old WWII veteran beats coronavirus

SURVIVOR: 100-year-old World War II veteran officially declared coronavirus-free and discharged from the hospital after a 58-day battle with COVID-19, defying the odds after losing his wife of 74 years to the illness. https://abcn.ws/2ZsgBTF

Posted by ABC News on Friday, May 22, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...