alex Certify ಲೈವ್‌ ಕಾರ್ಯಕ್ರಮದಲ್ಲೇ ಅರೆನಗ್ನಳಾಗಿ ಓಡಾಡಿದ್ಲು ನಿರೂಪಕನ ಗೆಳತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈವ್‌ ಕಾರ್ಯಕ್ರಮದಲ್ಲೇ ಅರೆನಗ್ನಳಾಗಿ ಓಡಾಡಿದ್ಲು ನಿರೂಪಕನ ಗೆಳತಿ…!

ಕೊರೊನಾದಿಂದಾಗಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಕಾರ್ಯ ಮುಂದುವರೆಸಿವೆ. ಇದರಲ್ಲಿ ಅನೇಕ ಚಾನಲ್‌ಗಳು ಕೂಡ ಇಂದಿಗೂ ಮನೆಯಿಂದಲೇ ಕೆಲಸ ನಿರ್ವಹಣೆ ಮಾಡುತ್ತಿವೆ. ವರ್ಕ್ ಫ್ರಂ ಹೋಮ್‌ನಲ್ಲಿರುವ ನಿರೂಪಕರು ಅಥವಾ ವರದಿಗಾರರು ಲೈವ್ ನೀಡುವಾಗ ಅಥವಾ ರೆಕಾರ್ಡಿಂಗ್ ಸಮಯದಲ್ಲಿ ಹಿಂದೆಯಿಂದ ಮನೆಯವರು ಅಥವಾ ಮಕ್ಕಳು ಓಡಾಡಿ ಅದು ನಗೆಪಾಟಲಿಗೆ ಈಡಾಗಿರುವ ಘಟನೆಗಳು ಅನೇಕ ಬಾರಿ ನಡೆದಿವೆ.

ಇದೀಗ ಮತ್ತೊಮ್ಮೆ ಇಂತಹದ್ದೇ ಘಟನೆಯೊಂದು ಸದ್ದು ಮಾಡುತ್ತಿದೆ. ಹೌದು, ಇದು ಸ್ಪೇನ್‌ನಲ್ಲಿ ಬಿಗ್ ಬ್ರದರ್ ರಿಯಾಲಿಟಿ ಷೋ ನಡೆಸಿ ಕೊಡುವ ಮಾರ್ಟಾ ಲೋಪೇಜ್ ಎಂಬ ಸೆಲಿಬ್ರಿಟಿಯೊಬ್ಬರ ಕಥೆ. ಇವರು ನಡೆಸಿ ಕೊಡುವ ಈ ಕಾರ್ಯಕ್ರಮಕ್ಕೆ ಅನೇಕ ಮಂದಿ ಫಾಲೋವರ್ಸ್ ಕೂಡ ಇದ್ದಾರೆ. ಈ ಸೆಲಿಬ್ರಿಟಿ ಸಂದರ್ಶನ ಒಂದರಲ್ಲಿ ನನಗೆ ಗರ್ಲ್ ಫ್ರೆಂಡ್ ಇಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಇದೀಗ ಇವರು ಹೇಳಿದ್ದು ಸುಳ್ಳಾ ಎಂಬ ಅನುಮಾನ ಪ್ರಾರಂಭವಾಗಿದೆ.

ಹೌದು, ಯುಟ್ಯೂಬ್ ಚಾನಲ್ ‌ನ ನಿರೂಪಕ ಜೇವಿಯರ್ ನೆಗ್ರೆ, ಸ್ಟೇಟ್ ಆಫ್ ಅಲಾರಂ ಎಂಬ ಕಾರ್ಯಕ್ರಮದಲ್ಲಿ ಮಾರ್ಟಾ ಲೋಪೇಜ್ ಅವರನ್ನು ಸಂದರ್ಶನ ಮಾಡುತ್ತಿದ್ದರು. ಈ ವೇಳೆ ಯುವತಿಯೊಬ್ಬಳು ಮುಕ್ಕಾಲು ಭಾಗ ನಗ್ನಳಾಗಿ ಓಡಾಡಿದ್ದಾಳೆ. ಇದನ್ನು ನೋಡಿದವರು ಒಮ್ಮೆ ಶಾಕ್ ಆಗಿದ್ದಾರೆ. ಜೊತೆಗೆ ಈತ ಮೊದಲೇ ನನಗೆ ಗರ್ಲ್ ‌ಫ್ರೆಂಡ್ ಇಲ್ಲ ಎಂದಿದ್ದರು. ಹಾಗಾದರೆ ಇವಳು ಯಾರು ಎಂಬ ಪ್ರಶ್ನೆ ಎಲ್ಲರಿಗೂ ಬಂದಿದೆ. ಕೂಡಲೇ ಪರಿಶೀಲನೆಗೆ ಇಳಿದ ಯುಟ್ಯೂಬ್‌ನವರು ಆಕೆ ಯಾರು ಎಂದು ಪತ್ತೆ ಹಚ್ಚಿದ್ದಾರೆ. ಈಕೆಯ ಹೆಸರು ಅಲೆಕ್ಸಿಯಾ ರಿವಾಸ್ ಅಂತೆ. ಈಕೆ ಕೂಡ ಪತ್ರಕರ್ತೆ ಎಂದು ಹೇಳಲಾಗುತ್ತಿದೆ. ಹಾಗೂ ಈಕೆ ಬೇರೊಬ್ಬರ ಗರ್ಲ್‌ಫ್ರೆಂಡ್ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...