alex Certify ಲಿವ್ ಇನ್ ನಲ್ಲಿರುವವರು ತಿಳಿದಿರಬೇಕು ಈ ವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಿವ್ ಇನ್ ನಲ್ಲಿರುವವರು ತಿಳಿದಿರಬೇಕು ಈ ವಿಷ್ಯ

ಸಮಾಜ ಎಷ್ಟೇ ಮುಂದುವರೆದಿರಲಿ, ನಮ್ಮಲ್ಲಿ ಲಿವ್ ಇನ್ ಸಂಬಂಧವನ್ನು ಈಗ್ಲೂ ಒಪ್ಪಿಕೊಂಡಿಲ್ಲ. ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ದಂಪತಿಗೆ ಇರುವಂತೆ ಲಿವ್ ಇನ್ ನಲ್ಲಿರುವವರಿಗೂ ಕೆಲವೊಂದು ಕಾನೂನಿದೆ. ಲಿವ್ ಇನ್ ವೇಳೆ ಆಗುವ ಮೋಸ ತಪ್ಪಿಸಲು ಇದನ್ನು ಜಾರಿಗೆ ತರಲಾಗಿದೆ. ಲಿವ್ ಇನ್ ನಲ್ಲಿರುವ ಮೊದಲು ಕೆಲವೊಂದು ಸಂಗತಿಯನ್ನು ತಿಳಿದುಕೊಂಡಿರಬೇಕು.

ಒಂದೇ ಕೊಠಡಿಯಲ್ಲಿ ವಾಸವಿದ್ದು, ಒಟ್ಟಿಗೆ ಊಟ, ನಿದ್ರೆ ಮಾಡ್ತಿದ್ದರೆ ನಿಮ್ಮನ್ನು ವಿವಾಹಿತರೆಂದು ಪರಿಗಣಿಸಲಾಗುತ್ತದೆ. ಲಿವ್-ಇನ್ ಸಂಬಂಧದಲ್ಲಿ ವಾಸಿಸುವ ಇಬ್ಬರು ಕಾನೂನಿನ ಪ್ರಕಾರ ಮದುವೆಯಾದಂತೆ.

ಲಿವ್-ಇನ್ ಸಂಬಂಧದಲ್ಲಿರುವುದರ ಜೊತೆಗೆ ನಿಮ್ಮ ಸಂಗಾತಿ ಗರ್ಭಿಣಿಯಾದ್ರೆ ಮತ್ತು ಅವಳು ಈ ಮಗುವಿಗೆ ಜನ್ಮ ನೀಡಲು ಬಯಸಿದರೆ, ಆ ಮಗುವನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ. ವಿವಾಹಿತ ದಂಪತಿ  ಮಗುವನ್ನು ನೋಡಿಕೊಳ್ಳುವಂತೆ ಲಿವ್ ಇನ್ ದಂಪತಿ ಕೂಡ ಮಗುವಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಸ್ತ್ರೀ ಭ್ರೂಣ ಹತ್ಯೆ ಮತ್ತು ಗರ್ಭಪಾತಕ್ಕೆ ಸಂಬಂಧಿಸಿದ ಎಲ್ಲಾ ನಿಬಂಧನೆಗಳು ಲೈವ್-ಇನ್ ನಲ್ಲಿ ವಾಸಿಸುವ ಜನರಿಗೂ ಅನ್ವಯಿಸುತ್ತವೆ.

ಲಿವ್ ಇನ್ ನಲ್ಲಿರುವವರಿಗೆ ಮಕ್ಕಳನ್ನು ದತ್ತು ಪಡೆಯುವ ಅಧಿಕಾರ ಇರುವುದಿಲ್ಲ. ಹಿಂದೂ ವಿವಾಹ ಕಾಯ್ದೆಯಡಿ, ಲೈವ್-ಇನ್ ಸಂಬಂಧದಲ್ಲಿ ಜನಿಸಿದ ಮಗುವಿಗೆ ವಿವಾಹಿತ ದಂಪತಿಯ ಮಗುವಿಗೆ ದೊರೆಯುವ ಎಲ್ಲಾ ಕಾನೂನು ಹಕ್ಕುಗಳು ಸಿಗುತ್ತವೆ.

ಲಿವ್-ಇನ್ ಸಂಬಂಧದಲ್ಲಿ ಒಬ್ಬ ಪಾಲುದಾರ ಇನ್ನೊಬ್ಬ ಪಾಲುದಾರನಿಗೆ ಮೋಸ ಮಾಡಿದರೆ ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಪೀಡಿತ ಬಯಸಿದರೆ ಐಪಿಸಿಯ ಸೆಕ್ಷನ್ 497 ರ ಅಡಿಯಲ್ಲಿ ಪ್ರಕರಣ ದಾಖಲಿಸುವ ಮೂಲಕ ಶಿಕ್ಷೆ ಕೊಡಿಸಬಹುದು.

ಹಿಂದೆ ಲಿವ್ ಇನ್ ನಲ್ಲಿ ಇದ್ದೆ ಎಂಬುದನ್ನು ಸಾಭೀತು ಪಡಿಸಿದ್ರೆ ಮಾತ್ರ ಬೇರೆಯಾದ ಮೇಲೆ ಹಣವನ್ನು ಸಂಗಾತಿಯಿಂದ ಪಡೆಯಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...