alex Certify ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರಿಗೆ ಈ ದೇಶ ನೀಡಲಿದೆ ಹಣ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರಿಗೆ ಈ ದೇಶ ನೀಡಲಿದೆ ಹಣ..!

ಕೊರೊನಾ ವೈರಸ್ ಹಿನ್ನಲೆಯಲ್ಲಿ ಅನೇಕ ದೇಶಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಅನೇಕ ದೇಶಗಳು ಪ್ರವಾಸಿ ತಾಣಗಳನ್ನು ಬಂದ್ ಮಾಡಿದೆ. ಇದ್ರಿಂದಾಗಿ ದೇಶಗಳಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಮಧ್ಯೆ  ಪ್ರವಾಸಿಗರನ್ನು ಆಕರ್ಷಿಸಲು ಜಪಾನ್ ವಿಶೇಷ ಪ್ಯಾಕೇಜ್ ಘೋಷಿಸಿದೆ.

ಪ್ರವಾಸಿಗರನ್ನು ಆಹ್ವಾನಿಸಲು 18.2 ಬಿಲಿಯನ್ ಡಾಲರ್ ಖರ್ಚು ಮಾಡುವುದಾಗಿ ಜಪಾನ್ ಸರ್ಕಾರ ಘೋಷಿಸಿದೆ. ಪ್ರವಾಸಿಗರ ಪ್ರಯಾಣ ವೆಚ್ಚದ ಅರ್ಧದಷ್ಟು ಹಣವನ್ನು ಸರ್ಕಾರ ಭರಿಸಲಿದೆ. ಅರ್ಧದಷ್ಟು ವೆಚ್ಚವನ್ನು ಭರಿಸಿದ ನಂತರ ಪ್ರವಾಸಿಗರು ಜಪಾನ್‌ಗೆ ಭೇಟಿ ನೀಡಲು ಮನಸ್ಸು ಮಾಡ್ತಾರೆಂದು ಅಲ್ಲಿನ ಸರ್ಕಾರ ಹೇಳಿದೆ.  ಈ ಯೋಜನೆಯ ಬಗ್ಗೆ ವಿವರವಾದ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ.

ಜುಲೈ ವೇಳೆಗೆ ಹೊಸ ಯೋಜನೆಯ ಮಾರ್ಗಸೂಚಿ ಹೊರಬರುವ ಸಾಧ್ಯತೆಯಿದೆ. ಸದ್ಯಕ್ಕೆ ಜಪಾನ್ ನಲ್ಲೂ ಪ್ರವಾಸಿಗರಿಗೆ ನಿಷೇಧವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...