alex Certify ಅತಿಯಾದ ಹಸ್ತ ಮೈಥುನದಿಂದ ಮಹಿಳೆಯರಿಗೆ ಕಾಡುತ್ತೆ ಈ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾದ ಹಸ್ತ ಮೈಥುನದಿಂದ ಮಹಿಳೆಯರಿಗೆ ಕಾಡುತ್ತೆ ಈ ಸಮಸ್ಯೆ

ಮಹಿಳೆಯರು ಮತ್ತು ಪುರುಷರು ತಮ್ಮ ಉತ್ಸಾಹವನ್ನು ಶಾಂತಗೊಳಿಸಲು ಹಸ್ತ ಮೈಥುನದ ಮೊರೆ ಹೋಗ್ತಾರೆ. ಸಮತೋಲಿತ ಹಸ್ತ ಮೈಥುನವು ದೈಹಿಕ ಮತ್ತು ಮಾನಸಿಕ ಪ್ರಯೋಜನ ನೀಡುತ್ತದೆ.  ಆದರೆ ಅತಿಯಾದ ಹಸ್ತ ಮೈಥುನವು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಸ್ತ ಮೈಥುನದಿಂದ ಮಹಿಳೆಯರಿಗೆ ಕೆಲವೊಂದು ಹಾನಿಯಾಗುತ್ತದೆ.

ಇತ್ತೀಚಿನ ಸಂಶೋಧನೆಯ ಪ್ರಕಾರ, ಹಸ್ತ ಮೈಥುನಕ್ಕೆ ವ್ಯಸನಿಯಾಗುವ ಮಹಿಳೆಯರು ಭವಿಷ್ಯದಲ್ಲಿ ತಮ್ಮ ಸಂಗಾತಿ ಜೊತೆ ಸಂಬಂಧ ಬೆಳೆಸಲು ಇಚ್ಛಿಸುವುದಿಲ್ಲ. ಆಗ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.

ಕೆಲ ಮಹಿಳೆಯರು ಇದನ್ನು ಹವ್ಯಾಸ ಮಾಡಿಕೊಂಡಿರುತ್ತಾರೆ. ಅಂತಹ ಮಹಿಳೆಯರಿಗೆ ಯಾವುದೇ ಕಾರಣದಿಂದ ಇದು ಸಾಧ್ಯವಾಗದೆ ಹೋದಾಗ ಅವರು ಒತ್ತಡ ಮತ್ತು ಕಿರಿಕಿರಿಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ.

ಹಸ್ತಮೈಥುನ ಅತಿಯಾದ್ರೆ ಮಹಿಳೆಯರಿಗೆ ಹೆಮಟುರಿಯಾ ಎಂಬ ಕಾಯಿಲೆ ಬರಬಹುದು. ಈ ರೋಗದಲ್ಲಿ ಮಹಿಳೆಯರ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ.

ನಿಯಮಿತವಾಗಿ ಹಸ್ತಮೈಥುನ ಮಾಡಿಕೊಳ್ಳುವ ಮಹಿಳೆಯರಲ್ಲಿ  ಮುಟ್ಟಿನ ಸಮಸ್ಯೆ ಕಾಡುತ್ತದೆ. ಮುಟ್ಟಿನ ಅವಧಿಯಲ್ಲಿ ಬದಲಾವಣೆ, ಶುಷ್ಕತೆ ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...