alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಚ್ಚು ಸಂಭೋಗ ಸುಖ ಅನುಭವಿಸ್ತಾನೆ ತೂಕದ ವ್ಯಕ್ತಿ…!

ಅಧಿಕ ತೂಕ, ಬೊಜ್ಜು ಹೊಂದಿದ್ದರೆ  ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹೆಚ್ಚಿದ ತೂಕವು ಸೌಂದರ್ಯ ಮತ್ತು  ವ್ಯಕ್ತಿತ್ವದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ತೂಕ ಮತ್ತು ಸೆಕ್ಸ್ ಬಗ್ಗೆ ನಡೆದ ಅಧ್ಯಯನವೊಂದು ಅಚ್ಚರಿ ವಿಷ್ಯ ಹೇಳಿದೆ.

ಅಧ್ಯಯನದ ಪ್ರಕಾರ, ಕಡಿಮೆ ತೂಕ ಮತ್ತು ತೆಳ್ಳಗಿನ ಪುರುಷರಿಗಿಂತ ಹೆಚ್ಚು ತೂಕ ಹೊಂದಿರುವ ಪುರುಷರು ಹೆಚ್ಚು ಸಂಭೋಗ ಸುಖ ಅನುಭವಿಸುತ್ತಾರಂತೆ.

ಯುಕೆಯಲ್ಲಿ ಸುಮಾರು 5000 ಪುರುಷರನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಸ್ಥೂಲಕಾಯದ ಪುರುಷರು ತೆಳ್ಳಗಿನ ಪುರುಷರಿಗಿಂತ ಹೆಚ್ಚು ಸಂಭೋಗ ಬೆಳೆಸುತ್ತಾರೆಂಬುದು ಬಹಿರಂಗವಾಯ್ತು. ಈ ಅಧ್ಯಯನವನ್ನು PLOS One ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ವರದಿಯ ಪ್ರಕಾರ, ಆಶ್ಚರ್ಯಕರ ಸಂಗತಿಯೆಂದರೆ ತಮ್ಮ ದೇಹದಲ್ಲಿ ಹೆಚ್ಚು ಬೊಜ್ಜನ್ನು ಹೊಂದಿರುವ ಪುರುಷರು ತೆಳ್ಳಗಿನ ಜನರಿಗಿಂತ ಕಡಿಮೆ ಸಮಸ್ಯೆಗಳನ್ನು ಹೊಂದಿದ್ದರಂತೆ. ಇದಕ್ಕಾಗಿಯೇ ಅವರು ಹೆಚ್ಚು ಸೆಕ್ಸ್ ಹೊಂದುವ ವಿಶ್ವಾಸವನ್ನು ಹೊಂದಿದ್ದರು ಎಂದು ವರದಿ ಹೇಳಿದೆ.

ಪುರುಷರಲ್ಲಿ ಮಾತ್ರವಲ್ಲದೆ ಮಹಿಳೆಯರಲ್ಲೂ ಇದೇ ವಿಷಯವನ್ನು ಗಮನಿಸಲಾಯ್ತು. ತೂಕ ಹೊಂದಿರುವ ಮಹಿಳೆಯರು ಕಡಿಮೆ ತೂಕದ ಮಹಿಳೆಯರಿಗಿಂತ ಶೇಕಡಾ 16ರಷ್ಟು ಹೆಚ್ಚು ಸಂಭೋಗದಲ್ಲಿ ಸಕ್ರಿಯವಾಗಿದ್ದರಂತೆ. ಈ ಹಿಂದೆ ನಡೆದ ಅನೇಕ ಅಧ್ಯಯನಗಳಲ್ಲಿ ಹೆಚ್ಚು ತೂಕ ಹೊಂದಿರುವವರು ಸಂಭೋಗದ ವಿಷ್ಯದಲ್ಲಿ ಸಾಕಷ್ಟು ಸಮಸ್ಯೆ ಹೊಂದಿದ್ದರು ಎಂಬುದು ಬಹಿರಂಗವಾಗಿತ್ತು. ಇದೇ ಮೊದಲ ಬಾರಿ ಸ್ಥೂಲಕಾಯದವರು ಸಂಭೋಗ ಸುಖ ಅನುಭವಿಸುತ್ತಾರೆಂಬ ವರದಿ ಬಂದಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...