alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯೂಯಾರ್ಕ್ ಕೊರೊನಾ ಕೇಂದ್ರ ಬಿಂದು: ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಕೊರೊನಾ ವೈರಸ್‌ನಿಂದ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶದ ಸ್ಥಿತಿ ಇನ್ನಷ್ಟು ಹದಗೆಡುತ್ತಿದೆ.

ಕೊರೊನಾ ವೈರಸ್‌ನಿಂದಾಗಿ ಅಮೆರಿಕದಲ್ಲಿ 1000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದಾರೆ. ಯುಎಸ್ನಲ್ಲಿ ಇಲ್ಲಿಯವರೆಗೆ 68,572 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಸೋಂಕಿತ ಜನರ ಅಂಕಿ ಪ್ರಕಾರ ಇಟಲಿ ಮತ್ತು ಚೀನಾದ ನಂತರ ಅಮೆರಿಕ ಮೂರನೇ ಸ್ಥಾನದಲ್ಲಿದೆ.

ಅಮೆರಿಕದಲ್ಲಿ ವೇಗವಾಗಿ ಹರಡುವ ಕೊರೊನಾ ವೈರಸ್‌ನಿಂದ ಈವರೆಗೆ ಒಟ್ಟು 1031 ಜನರು ಸಾವನ್ನಪ್ಪಿದ್ದಾರೆ. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ನ್ಯೂಯಾರ್ಕ್‌ನಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ಸುಮಾರು 366 ಜನರು ಇಲ್ಲಿ ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ ವಾಷಿಂಗ್ಟನ್‌ನಲ್ಲಿ 133 ಜನರು ಸಾವನ್ನಪ್ಪಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಬಗ್ಗೆ ಯುಎಸ್‌ಗೆ ಎಚ್ಚರಿಕೆ ನೀಡಿದೆ. ಕೊರೊನಾದ ಮುಂದಿನ ಕೇಂದ್ರ ಅಮೆರಿಕವಾಗಬಹುದು ಎಂದು ಡಬ್ಲ್ಯುಎಚ್‌ಒ ಹೇಳಿದೆ. ಡಬ್ಲ್ಯುಎಚ್‌ಒ ವಕ್ತಾರ ಮಾರ್ಗರೇಟ್ ಹ್ಯಾರಿಸ್ ಕೂಡ ಅಮೆರಿಕ ಎರಡನೇ ಇಟಲಿಯಾಗಬಹುದು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...