alex Certify ವಾಹನ ವಿಮೆ ಖರೀದಿಸಲು ಯೋಜಿಸುತ್ತಿರುವಿರಾ ? ಹಾಗಾದ್ರೆ ಈ ವಂಚನೆ ಬಗ್ಗೆ ಇರಲಿ ಎಚ್ಚರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ವಿಮೆ ಖರೀದಿಸಲು ಯೋಜಿಸುತ್ತಿರುವಿರಾ ? ಹಾಗಾದ್ರೆ ಈ ವಂಚನೆ ಬಗ್ಗೆ ಇರಲಿ ಎಚ್ಚರ

ನಿಮ್ಮ ವಾಹನಕ್ಕೆ ವಿಮಾ ಪಾಲಿಸಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಕೊಂಚ ಎಚ್ಚರಿಕೆ ವಹಿಸಿ. ದ್ವಿಚಕ್ರ ವಾಹನಗಳ ಹೆಸರಿನಲ್ಲಿ ನಾಲ್ಕು ಚಕ್ರ ಮತ್ತು ತ್ರಿಚಕ್ರ ವಾಹನಗಳ ಮೋಟಾರು ವಿಮಾ ಪಾಲಿಸಿಗಳನ್ನು ಮಾಡುತ್ತಿರುವ ಆರೋಪದ ಮೇಲೆ ಮುಂಬೈ ಅಪರಾಧ ವಿಭಾಗವು ಮೂವರನ್ನು ಬಂಧಿಸಿದೆ.

ಆರೋಪಿಗಳು ತುಂಬಾ ಕುತಂತ್ರಿಗಳಾಗಿದ್ದು, ಥರ್ಡ್​ ಪಾರ್ಟಿ ವಿಮೆಯ ಸಂದರ್ಭದಲ್ಲಿ, ವಿಮಾ ಕಂಪನಿಗಳು ವಾಹನಗಳ ವಿವರಗಳನ್ನು ಪರಿಶೀಲಿಸುವುದಿಲ್ಲ. ಆರೋಪಿಗಳು ಇದರ ಲಾಭ ಪಡೆದಿದ್ದಾರೆ.

ವಿಮಾ ಕಂಪನಿ ಟಾಟಾ ಎಐಜಿ ಪಾಲಿಸಿಯನ್ನು ಪರಿಶೀಲಿಸಿದಾಗ ವಂಚನೆ ಪತ್ತೆಯಾಗಿದೆ ಮತ್ತು ಪಾಲಿಸಿಯನ್ನು ಮೋಸದಿಂದ ಮಾಡಿರುವುದು ಕಂಡುಬಂದಿದೆ. ಎಲ್ಲಾ ಪಾಲಿಸಿಗಳು ಒಂದೇ ಮೊಬೈಲ್​ ಸಂಖ್ಯೆಗಳನ್ನು ಒಳಗೊಂಡಿವೆ ಮತ್ತು ದ್ವಿಚಕ್ರ ವಾಹನಗಳಿಂದ ವಿವರಗಳನ್ನು ತೆಗೆದುಕೊಂಡು ನಾಲ್ಕು ಮತ್ತು ತ್ರಿಚಕ್ರ ವಾಹನಗಳಿಗೆ ವಿಮಾ ಪಾಲಿಸಿಗಳನ್ನು ಮಾಡಲಾಗಿದೆ.

ಎಲ್ಲಾ ಪಾಲಿಸಿಗಳಲ್ಲಿ ಒಂದೇ ಸಂಖ್ಯೆಯನ್ನು ಹಾಕಲಾಗಿದೆ ಇದರಿಂದ ವಿವಿಧ ಪಾಲಿಸಿಗಳಿಗೆ ಸಂಬಂಧಿಸಿದ ಯಾವುದೇ ಕರೆಯನ್ನು ಒಂದು ಸಂಖ್ಯೆಯ ಮೂಲಕ ಸ್ವೀಕರಿಸಬಹುದು ಮತ್ತು ಪರಿಸ್ಥಿತಿಯನ್ನು ನಿರ್ವಹಿಸುವುದು ಸುಲಭವಾಗುತ್ತದೆ ಎಂಬ ರೀತಿ ತಂತ್ರ ಬಳಸಲಾಗಿದೆ ಪೊಲೀಸರು ಹೇಳಿದ್ದಾರೆ.

ಈ ಅವ್ಯವಹಾರಗಳ ಬಗ್ಗೆ ವಿಮಾ ಕಂಪನಿ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದೆ. ದೂರಿನ ಆಧಾರದಲ್ಲಿ ಪೊಲೀಸರು ಇಮೇಲ್​ ಐಡಿ ಮತ್ತು ಫೋನ್​ ಸಂಖ್ಯೆಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ.

ಈ ರೀತಿ 1.5 ಕೋಟಿಗೂ ಹೆಚ್ಚು ಮೌಲ್ಯದ ಪಾಲಿಸಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮುಂದೆ ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂತಹ ಖದೀಮರು ಇರುವ ಕಾರಣ ವಾಹನದ ವಿಮೆಯನ್ನು ಮಾಡಿಸಲು ನೀವು ಯೋಜಿಸುತ್ತಿದ್ದರೆ ಎಚ್ಚರವಾಗಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...