alex Certify 24 ಗಂಟೆಗಳ ಕಾಲ ’ಮೋದಿಜಿ’ ಜಪ ಮಾಡಿದ ಯುಟ್ಯೂಬರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

24 ಗಂಟೆಗಳ ಕಾಲ ’ಮೋದಿಜಿ’ ಜಪ ಮಾಡಿದ ಯುಟ್ಯೂಬರ್

Man Chants 'Modiji, Modiji' For 24 Hours Straight on YouTube Live to Celebrate PM Modi's Birthday

ಗುರುವಾರ 70ನೇ ವಸಂತಕ್ಕೆ ಕಾಲಿಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ದೇಶವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ. ಅನೇಕರು ಪ್ರಧಾನಿಗೆ ವಿಶ್ ಮಾಡಲು ಬಹಳ ಕ್ರಿಯಾಶೀಲ ಐಡಿಯಾಗಳನ್ನೂ ಉಪಯೋಗಿಸಿದ್ದಾರೆ.

ಯೂಟ್ಯೂಬರ್‌ ಅನ್ಮೋಲ್ ಬಕಾಯಾ ಪ್ರಧಾನಿ ಮೋದಿ ಹೆಸರನ್ನು 24 ಗಂಟೆಗಳ ಕಾಲ ಭಜಿಸಿದ್ದಾರೆ. ಈ ಕುರಿತು ಮಾತನಾಡಿದ ಅನ್ಮೋಲ್, “ಕಳೆದ ವರ್ಷದಂದು ನಾನು ಪ್ರಧಾನಿ ಕುರಿತಂತೆ ಸಾಕಷ್ಟು ಸಕಾರಾತ್ಮಕ & ನಕಾರಾತ್ಮಕ ಮಾತುಗಳನ್ನು ಕೇಳಿದ್ದೆ. ಆದರೆ ವೈಯಕ್ತಿಕವಾಗಿ ನನಗೆ ಅವರ ಮೇಲೆ ಅಪಾರ ಗೌರವವಿದ್ದು, ದೇಶಕ್ಕಾಗಿ ಅವರು ಮಾಡಿರುವ ಅಷ್ಟೆಲ್ಲಾ ಕೆಲಸಕ್ಕೆ ನನ್ನ ಬೆಂಬಲ ಸದಾ ಇರಲಿದ್ದು, ನಾನು ಅವರನ್ನು ಮೆಚ್ಚಿ ಮಾಡಬಹುದಾದ ಸಣ್ಣದೊಂದು ಕೆಲಸ ಇದಾಗಿದೆ” ಎಂದು ಬಕಯಾ ತಮ್ಮ ಲೈವ್‌ ಸ್ಟ್ರೀಮ್ ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.

ಇದೇ ವೇಳೆ ಪುರಿ ಎಂದ ಜಗನ್ನಾಥ ದೇವರ ಬಳಿಕ ನೆನಪಾಗುವ ಮತ್ತೊಂದು ಹೆಸರೆಂದೇ ಹೇಳಬಹುದಾದ ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್‌ ಕಡಲ ತೀರದ ಮರಳಿನಲ್ಲಿ ಅವರಿಗಾಗಿ ಹುಟ್ಟುಹಬ್ಬದ ವಿಶೇಷ ಗ್ರೀಟಿಂಗ್‌ ರಚಿಸಿದ್ದು, ಆತ್ಮನಿರ್ಭರ ಭಾರತದ ಹರಿಕಾರ ಎಂದು ಹ್ಯಾಶ್‌ಟ್ಯಾಗ್ ಒಂದನ್ನು ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...