alex Certify ಶಾಕಿಂಗ್: ಹೆಣ ತೋರಿಸಲು 51 ಸಾವಿರ ರೂ.ಗೆ ಬೇಡಿಕೆ ಇಟ್ಟ ಖಾಸಗಿ ಆಸ್ಪತ್ರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಹೆಣ ತೋರಿಸಲು 51 ಸಾವಿರ ರೂ.ಗೆ ಬೇಡಿಕೆ ಇಟ್ಟ ಖಾಸಗಿ ಆಸ್ಪತ್ರೆ

ಕೊಲ್ಕತ್ತಾ: ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ -19 ನಿಂದ ಮೃತ ವ್ಯಕ್ತಿಯೊಬ್ಬರ ಶವ ನೋಡಲು ಸಂಬಂಧಿಕರಿಂದ 51,000 ರೂ. ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ.

ಸತ್ತು ಹಲವು ಗಂಟೆಗಳ ನಂತರ ಆಸ್ಪತ್ರೆ, ಸಂಬಂಧಿಕರಿಗೆ ಮಾಹಿತಿ ನೀಡಿದೆ ಎನ್ನಲಾಗಿದೆ.
ಹರಿ ಗುಪ್ತಾ ಎನ್ನುವವರು ಮೃತಪಟ್ಟಿದ್ದು, ಹಲವು ತಾಸುಗಳ ಬಳಿಕ ಮನೆಯವರಿಗೆ ತಿಳಿಸಲಾಗಿತ್ತು. ವಿಳಂಬದ ಬಗ್ಗೆ ಆಸ್ಪತ್ರೆಯವರನ್ನು ಕೇಳಿದರೆ ನಿಮ್ಮ ಸಂಪರ್ಕ ಸಂಖ್ಯೆ ಇರಲಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಮೃತರ ಪುತ್ರ ಸಾಗರ ಗುಪ್ತಾ ದೂರಿದ್ದಾರೆ.

ಮನೆಯವರು ಆಸ್ಪತ್ರೆಗೆ ತಲುಪಿದಾಗ ಶವವನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿಸಲಾಗಿತ್ತು. ಶಿಬಪುರದ ಅಂತ್ಯಕ್ರಿಯಾ ಪ್ರದೇಶಕ್ಕೆ ತಲುಪಿದಾಗ ಮೃತ ದೇಹ ನೋಡಲು 51 ಸಾವಿರ ರೂ. ನೀಡಬೇಕು ಎಂದು ಬೇಡಿಕೆ ಇಡಲಾಯಿತು. ಆ ಬಗ್ಗೆ ಪ್ರಶ್ನಿಸಿದಾಗ ಅದನ್ನು 31 ಸಾವಿರ ರೂ.ಗೆ ಇಳಿಸಲಾಯಿತು. ಈ ಕುರಿತು ಕುಟುಂಬ ಪೊಲೀಸರಿಗೆ ದೂರು ನೀಡಿತು.

ಪೊಲೀಸರು ಆಗಮಿಸಿದರೂ ಬಗ್ಗದ ಆಸ್ಪತ್ರೆ ಸಿಬ್ಬಂದಿ ತಮ್ಮ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ಎಂದರು. ಈ ಘಟನೆಗಳ ವಿಡಿಯೋ ಮಾಡಲು ಮುಂದಾದಾಗ ಮನೆಯವರ ಮೊಬೈಲ್ ಕಿತ್ತುಕೊಳ್ಳಲಾಯಿತು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...