alex Certify ಏಪ್ರಿಲ್‌ 30 ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಉ. ಪ್ರದೇಶ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಪ್ರಿಲ್‌ 30 ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಉ. ಪ್ರದೇಶ ಸರ್ಕಾರ

ಕೊರೊನಾ ವೈರಸ್​ ಸೋಂಕು ಉಲ್ಬಣ ಹಿನ್ನೆಲೆ ಏಪ್ರಿಲ್​​ 30ನೇ ತಾರೀಖಿನವರೆಗೂ ರಾಜ್ಯದಲ್ಲಿ 1 ರಿಂದ 12ನೇ ತರಗತಿಗಳು ಬಂದ್​ ಇರಲಿವೆ ಎಂದು ಉತ್ತರ ಪ್ರದೇಶ ಸರ್ಕಾರ ಆದೇಶ ನೀಡಿದೆ.

ರಾಜ್ಯದಲ್ಲಿ ಒಂದೇ ದಿನ 15,353 ಕೊರೊನಾ ಕೇಸ್​ಗಳು ವರದಿಯಾದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಈ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ. ಆದರೆ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳು ನಡೆಯಲಿವೆ ಎಂದು ಉತ್ತರ ಪ್ರದೇಶ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಮಾತ್ರವಲ್ಲದೇ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ನಿತ್ಯ ಶಾಲೆ ಹಾಗೂ ಕಾಲೇಜುಗಳಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಲಾಗಿದೆ.

ಉತ್ತರ ಪ್ರದೇಶದಲ್ಲಿ ಒಂದೇ ದಿನ 15,353 ಕೊರೊನಾ ಕೇಸ್​ಗಳು ವರದಿಯಾಗಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,92,092 ಆಗಿದೆ. ರಾಜ್ಯದಲ್ಲಿ ಪ್ರಸ್ತುತ 71,241 ಸಕ್ರಿಯ ಕೊರೊನಾ ಕೇಸ್​ಗಳಿವೆ. ಹಾಗೂ ಇಲ್ಲಿಯವರೆಗೆ 6,11,622 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್​ ನಿಯಂತ್ರಣಕ್ಕೆ ತರಬೇಕು ಅಂತಾ ಯೋಗಿ ಆದಿತ್ಯನಾಥ್​ ಸರ್ಕಾರ ನೈಟ್​ ಕರ್ಫ್ಯೂ ಜಾರಿಗೆ ತಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...