alex Certify ವಿಧವೆಯೊಂದಿಗೆ ಸಂಬಂಧ ಬೆಳೆಸಿದ ಆಟೋ ಚಾಲಕನಿಂದ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಧವೆಯೊಂದಿಗೆ ಸಂಬಂಧ ಬೆಳೆಸಿದ ಆಟೋ ಚಾಲಕನಿಂದ ಘೋರ ಕೃತ್ಯ

ತಿರುವನಂತಪುರಂ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ಆಟೋ ಚಾಲಕ ಕೊಲೆಮಾಡಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

37 ವರ್ಷದ ಶೋಭಾ ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ಆರೋಪಿ ಬಿಬಿನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮಂದಮಚ್ಚೇರಿ ಮೂಲದ ಶೋಭಾ ಆಗಸ್ಟ್ 24 ರಂದು ನಾಪತ್ತೆಯಾಗಿದ್ದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡ ಸಂದರ್ಭದಲ್ಲಿ ಆಗಸ್ಟ್ 28 ರಂದು ಅವರ ನಿವಾಸದಿಂದ 34 ಕಿಲೋಮೀಟರ್ ದೂರದ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ.

ಆಟೋಚಾಲಕ ಬಿಬಿನ್ ಫೇಸ್ಬುಕ್ ಮೂಲಕ ಶೋಭಾಗೆ ಪರಿಚಿತನಾಗಿದ್ದು ನಂತರದಲ್ಲಿ ಇಬ್ಬರ ನಡುವೆ ಗೆಳೆತನವಾಗಿ ಸಂಬಂಧ ಬೆಳೆಸಿದ್ದಾರೆ. ಶೋಭಾ ನಂತರ ಮತ್ತೊಬ್ಬ ಯುವತಿಯೊಂದಿಗೆ ಬಿಬಿನ್ ಅಕ್ರಮ ಸಂಬಂಧ ಬೆಳೆಸಿದ್ದು ಈ ಬಗ್ಗೆ ಶೋಭಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಆಕೆಯನ್ನು ಕೊಲೆ ಮಾಡಿದ ಬಿಬಿನ್ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ತನಿಖೆ ಕೈಗೊಂಡ ಪೊಲೀಸರು ಶೋಭಾಳ ಫೋನ್ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...