alex Certify ಸಹೋದರಿ ಮೇಲೆ ಅತ್ಯಾಚಾರ: ದುಡುಕಿದ ತಂಗಿ, ಅಣ್ಣನಿಂದ ಜೈಲಿನಲ್ಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರಿ ಮೇಲೆ ಅತ್ಯಾಚಾರ: ದುಡುಕಿದ ತಂಗಿ, ಅಣ್ಣನಿಂದ ಜೈಲಿನಲ್ಲೇ ಘೋರ ಕೃತ್ಯ

ನವದೆಹಲಿ: ಸಹೋದರಿ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯನ್ನು ಜೈಲಿನಲ್ಲೇ ಯುವಕ ಕೊಲೆ ಮಾಡಿದ ಘಟನೆ ದೆಹಲಿಯ ತಿಹಾರ್ ಸೆಂಟ್ರಲ್ ಜೈಲ್ ನಲ್ಲಿ ನಡೆದಿದೆ.

ಅತ್ಯಾಚಾರ ಆರೋಪದ ಮೇಲೆ ಜೈಲು ಸೇರಿದ್ದ ಮೆಹತಾಬ್(28) ಕೊಲೆಯಾದ ಯುವಕ. 22 ವರ್ಷದ ಜಾಕಿರ್ ಕೊಲೆ ಆರೋಪಿಯಾಗಿದ್ದಾನೆ. ಜೂನ್ 29ರಂದು ಘಟನೆ ನಡೆದಿದೆ. 2014ರಲ್ಲಿ ದೆಹಲಿಯ ಅಂಬೇಡ್ಕರ್ ನಗರ ಪ್ರದೇಶದಲ್ಲಿ ಜಾಕೀರ್ ಅಪ್ರಾಪ್ತ ಸಹೋದರಿ ಮೇಲೆ ಮೆಹತಾಬ್ ಅತ್ಯಾಚಾರ ಎಸಗಿದ್ದ. ಘಟನೆ ನಂತರ ಅಂಬೇಡ್ಕರ್ ನಗರ ಪೊಲೀಸರು ಪೊಕ್ಸೋ ಕಾಯ್ದೆಯಡಿ ಆರೋಪಿ ಮೆಹತಾಬ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಅತ್ಯಾಚಾರದ ನಂತರ ಆಘಾತಕ್ಕೆ ಒಳಗಾದ ಜಾಕಿರ್ ಸಹೋದರಿ ಆತ್ಮಹತ್ಯೆ ಮಾಡಿಕೊಂಡಿದ್ದು ಇದರಿಂದ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಜಾಕೀರ್ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ತಿಹಾರ್ ಜೈಲ್ ಸೇರಿಕೊಂಡಿದ್ದಾನೆ.

ಜೂನ್ 29ರಂದು ಬೆಳಗಿನ ಪ್ರಾರ್ಥನೆಯ ವೇಳೆ ಕೈದಿಗಳು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಏಕಾಏಕಿ ಮೆಹತಾಬ್ ಕೋಣೆಗೆ ನುಗ್ಗಿ ಹರಿತವಾದ ವಸ್ತುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...