alex Certify ಬೆರಗಾಗುವಂತೆ ಮಾಡುತ್ತೆ ಈ ಬಾಲ್ಯ ಸ್ನೇಹಿತರ ವೃದ್ಧಾಪ್ಯದಲ್ಲಿನ ಜೀವನೋತ್ಸಾಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗುವಂತೆ ಮಾಡುತ್ತೆ ಈ ಬಾಲ್ಯ ಸ್ನೇಹಿತರ ವೃದ್ಧಾಪ್ಯದಲ್ಲಿನ ಜೀವನೋತ್ಸಾಹ

ಕಾಲೇಜು ದಿನಗಳಲ್ಲಿ ಸ್ನೇಹಿತರೆಲ್ಲ ಸೇರಿ ಗೋವಾ ಟ್ರಿಪ್​ಗೆ ಪ್ಲಾನ್​ ಮಾಡೋದು ಹೊಸದೇನಲ್ಲ. ಆದರೆ ಕೆಲವೇ ಕೆಲವು ಮಂದಿ ಮಾತ್ರ ಗೋವಾ ಟ್ರಿಪ್​ಗೆ ನಿಜವಾಗಿಯೂ ಹೋಗಿ ಬರ್ತಾರೆ.

ಇನ್ನು ಅನೇಕ ಮಂದಿ ಪ್ಲಾನ್​ ಮಾಡೋದ್ರಲ್ಲಿಯೇ ತಮ್ಮ ಅರ್ಧ ಆಯುಷ್ಯವನ್ನ ಕಳೆದುಬಿಡ್ತಾರೆ. ಅಲ್ಲಿಗೆ ಗೋವಾ ಟ್ರಿಪ್​ ಅನ್ನೋದು ಒಂದು ಕನಸಾಗಿಯೇ ಉಳಿದುಬಿಡುತ್ತೆ.

ಆದರೆ ನಾವು ಈಗ ಹೇಳೋಕೆ ಹೊರಟಿರುವ ಈ ಕತೆಯನ್ನ ಕೇಳಿದ್ರೆ ಮನಸ್ಸು ಮಾಡಿದ್ರೆ ಗೋವಾ ಟ್ರಿಪ್​​ಗೆ ಯಾವಾಗ ಬೇಕಿದ್ದರು ಹೋಗಬಹುದು ಎಂದು ನಿಮಗೆ ಎನಿಸದೇ ಇರದು.

ಹ್ಯುಮನ್ಸ್ ಆಫ್​ ಬಾಂಬೆ, 60 ವರ್ಷ ವಯಸ್ಸಿನ ಮೂವರು ಸ್ನೇಹಿತರ ಫೋಟೋವನ್ನ ಶೇರ್​ ಮಾಡಿದೆ.

ಈ ಮೂವರು ಶಾಲೆ ಹಾಗೂ ಕಾಲೇಜು ದಿನದ ಸ್ನೇಹಿತರು. ಈ ಮೂವರು ತಮ್ಮ 68ನೇ ವಯಸ್ಸಿನಲ್ಲಿ ಗೋವಾ ಟ್ರಿಪ್​ ಮಾಡೋ ಮೂಲಕ ಯುವಜನತೆಯ ಹುಬ್ಬೇರುವಂತೆ ಮಾಡಿದ್ದಾರೆ. ರಸ್ತೆ ಮಾರ್ಗದ ಮೂಲಕ ನಾಲ್ಕು ದಿನಗಳ ಸಮಯದಲ್ಲಿ ಚಂಡೀಗಢದಿಂದ ಗೋವಾಗೆ ತಲುಪಿದ್ದಾರೆ.

ಮಾರ್ಗ ಮಧ್ಯದಲ್ಲಿ ಈ ಸ್ನೇಹಿತರು ಬೆಂಗಳೂರು, ಚೆನ್ನೈ, ಹಂಪಿ ಸೇರಿದಂತೆ ವಿವಿಧ ಸ್ಥಳಕ್ಕೆ ಭೇಟಿಯನ್ನೂ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೇ ಇವರು ಅಂಡಮಾನ್​ಗೆ ಹೋಗಲು ಕ್ಷಣಮಾತ್ರದಲ್ಲಿ ನಿರ್ಧರಿಸಿದ್ದಾರೆ. ಹಾಗೂ ಪೋರ್ಟ್​ಬ್ಲೇರ್​ಗೆ ಹಾರಿ 9 ದಿನಗಳ ಕಾಲ ಸಖತ್​ ಎಂಜಾಯ್​ ಮಾಡಿದ್ದಾರೆ.

ಈ ಮೂವರು ಸ್ನೇಹಿತರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ವೃದ್ಧಾಪ್ಯದಲ್ಲೂ ಇಂತಹದ್ದೊಂದು ಭರ್ಜರಿ ಪ್ರವಾಸ ಮಾಡಿದ ಇವರ ಕಾರ್ಯಕ್ಕೆ ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸ್ತಿದ್ದಾರೆ.

“Earlier this year, when I was sipping on some wine at home, something inside me snapped and I thought, ‘I want to do…

Posted by Humans of Bombay on Thursday, March 18, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...