alex Certify ಬೀದಿ ನಾಯಿಗಳ ರಕ್ಷಣೆಗೆ ವಿನೂತನ ಪ್ಲಾನ್​ ಮಾಡಿದೆ ಈ ಎನ್​ಜಿಓ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿ ನಾಯಿಗಳ ರಕ್ಷಣೆಗೆ ವಿನೂತನ ಪ್ಲಾನ್​ ಮಾಡಿದೆ ಈ ಎನ್​ಜಿಓ

ಹೈದರಾಬಾದ್​ ಮೂಲದ ಎ ಕಾಲರ್​​ಅಪ್​​ ಎಂಬ ಹೆಸರಿನ ಎನ್​​​ಜಿಒವೊಂದು ಬೀದಿ ನಾಯಿಗಳನ್ನ ಅಪಘಾತದಿಂದ ಪಾರು ಮಾಡುವ ಸಲುವಾಗಿ ಶ್ವಾನಗಳ ಕುತ್ತಿಗೆಗೆ ಹೊಳೆಯುವ ಕತ್ತಿನ ಪಟ್ಟಿಯನ್ನ ಅಳವಡಿಸುವ ಮೂಲಕ ಮಾನವೀಯ ಕಾರ್ಯ ಮಾಡಿದೆ. ಈ ರೀತಿಯ ಹೊಳೆಯುವ ಕತ್ತಿನ ಪಟ್ಟಿಯಿಂದಾಗಿ ಶ್ವಾನಗಳು ರಾತ್ರಿ ಹೊತ್ತು ರಸ್ತೆ ಅಪಘಾತಕ್ಕೀಡಾಗುವ ಅಪಾಯ ಕಡಿಮೆಯಾಗಲಿದೆ.

ಕತ್ತಿನ ಪಟ್ಟಿಗಳನ್ನ ಹಗುರವಾದ ವಸ್ತುವಿನಿಂದ ಮಾಡಲಾಗಿದ್ದು ಪ್ರಾಣಿಗಳಿಗೆ ಸಂಪೂರ್ಣ ಸುರಕ್ಷಿತವಾಗಿದೆ. ಈ ಪಟ್ಟಿಯ ಸಹಾಯದಿಂದ ವಾಹನ ಚಾಲಕರು ದೂರದಿಂದಲೇ ಪ್ರಾಣಿಗಳನ್ನ ಗುರುತಿಸಬಹುದಾಗಿದೆ ಎಂದು ಎನ್​ಜಿಓ ಸ್ಥಾಪಕಿ ಚೈತನ್ಯ ಗಂಡ್ಲುರಿ ಹೇಳಿದ್ರು.

ನಾನು ರಸ್ತೆಗಳಲ್ಲಿ ಕಾರಿನಲ್ಲಿ ಪ್ರಯಾಣ ಮಾಡುವ ವೇಳೆಯಲ್ಲಿ ಅತಿ ವೇಗದಲ್ಲಿ ಚಾಲನೆ ಮಾಡುವ ವಾಹನಗಳು ಶ್ವಾನಗಳ ಮೇಲೆಯೇ ಹರಿಸಿಕೊಂಡು ಹೋಗುತ್ತಿದ್ದವು. ಮೂಕ ಪ್ರಾಣಿಗಳ ಪ್ರಾಣವನ್ನ ರಕ್ಷಿಸುವ ಸಲುವಾಗಿ ಏನಾದರೊಂದು ಮಾಡುವ ಯೋಚನೆ ಮಾಡಿದ್ದ ನಾನು ಕೊನೆಗೂ ಈ ಪ್ಲಾನ್​ ಕಂಡು ಹಿಡಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...