alex Certify ಇಲ್ಲಿದೆ ಬೀಜ ತೆಗೆಯದೇ ನಿಂಬೆಹಣ್ಣು ಹಿಂಡೋ ಉಪಾಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಬೀಜ ತೆಗೆಯದೇ ನಿಂಬೆಹಣ್ಣು ಹಿಂಡೋ ಉಪಾಯ…!

ನೀವು ಅದೆಷ್ಟೇ ಪ್ರಯತ್ನ ಪಟ್ಟರೂ ಜ್ಯೂಸ್ ಅಥವಾ ಚಿತ್ರಾನ್ನ ತಯಾರಿಸುವಾಗ ನಿಂಬೆಹಣ್ಣಿನ ಬೀಜ ಅವುಗಳ ಒಳಗೆ ಬೀಳದೇ ಇರದು. ಇನ್ನು ನಿಂಬು ರಸ ಕೈಗೆ ತಾಗದೇ ಹಣ್ಣು ಹಿಂಡಲು ಸಾಧ್ಯವೇ ಇಲ್ಲ.

ಆದರೆ, ಟಿಕ್ ಟಾಕ್ ನಲ್ಲಿ ಅಪ್ ಲೋಡ್ ಮಾಡಿದ ವಿಡಿಯೋವೊಂದು ಲಿಂಬೆ ಹಣ್ಣನ್ನು ಕಟ್ ಮಾಡದೇ ಬೀಜ ತೆಗೆಯದೆ, ಕೈಗೆ ರಸ ತಾಗಿಸಿಕೊಳ್ಳದೇ ಜ್ಯೂಸ್ ಮಾಡುವ ವಿಧಾನವನ್ನು ತೋರಿಸಿಕೊಟ್ಟಿದೆ.

ವಿಧಾನ:

ಒಂದು ಸೂಜಿ ಅಥವಾ ದಬ್ಬಣವನ್ನು ತೆಗೆದುಕೊಂಡು ನಿಂಬೆಹಣ್ಣಿನ ಬುಡ ಅಥವಾ ತೊಟ್ಟಿನ ಭಾಗದಲ್ಲಿ ಚುಚ್ಚಿ ರಂಧ್ರ ಮಾಡಿಕೊಳ್ಳಿ ನಂತರ ಸುಲಭವಾಗಿ ನೇರವಾಗಿ ಜ್ಯೂಸ್ ಮಗ್ ಗೆ ರಸವನ್ನು ಹಿಂಡಬಹುದು.‌

ನಿಂಬುರಸ ಹಿಂಡುವ ಪೂರ್ವದಲ್ಲಿ ಹಣ್ಣನ್ನು ಕೈಯ್ಯಿಂದ ಕೆಲವು ಬಾರಿ ತಿಕ್ಕಿಕೊಳ್ಳಬೇಕು. ನಿಂಬೆಹಣ್ಣಿನ ರಸ ತೆಗೆಯುವ ಈ ವಿಧಾನಕ್ಕೆ ಸಾಕಷ್ಟು ಕಮೆಂಟ್ ಬಂದಿದ್ದು “OMG…! ಇದು ಜೀವನ ಬದಲಿಸುವ ಸಂಶೋಧನೆ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. “ಜ್ಯೂಸರ್ ಇಲ್ಲದೆ ನಿಂಬು ಜ್ಯೂಸ್ ಮಾಡುವ ವಿಧಾನವನ್ನು ನಾನಿಂದು ಕಲಿತೆ” ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...