alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತ ಸಹೋದರಿ ಗರ್ಭಿಣಿಯಾಗಲು ಕಾರಣವಾದ ಅಪ್ರಾಪ್ತ ಸಹೋದರ

Minor raped in Vellore

ವೆಲ್ಲೂರ್‌ನ ಪೆರುಮುಗೈನಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. 17 ವರ್ಷದ ಬಾಲಾಪರಾಧಿ ತನ್ನ 16 ವರ್ಷದ ಸಹೋದರಿಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ.

ಗುರುವಾರ  ವೆಲ್ಲೂರು  ಮಹಿಳಾ ಪೊಲೀಸರು ಆರೋಪಿಯನ್ನು ಬಂಧಿಸಿ ಸಂತ್ರಸ್ತೆಯನ್ನು ವೆಲ್ಲೂರು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದ್ದಾರೆ.

ಹತ್ತನೆ ತರಗತಿ ಉತ್ತೀರ್ಣನಾದ್ಮೇಲೆ ಮನೆಯಲ್ಲೇ ಇದ್ದ ಆರೋಪಿ ಕೆಲಸವಿಲ್ಲದೆ ಅಲೆದಾಡುತ್ತಿದ್ದ. ಕೆಟ್ಟ ಚಟಕ್ಕೆ ಬಿದ್ದಿದ್ದ ಅಪ್ರಾಪ್ತ ಮದ್ಯಪಾನ ಮಾಡ್ತಿದ್ದನೆಂದು ಪೊಲೀಸರು ಹೇಳಿದ್ದಾರೆ. ಪಾಲಕರಿಬ್ಬರೂ ಕೂಲಿ ಕೆಲಸ ಮಾಡ್ತಿದ್ದರಂತೆ. ಮಗಳು ಕೂಡ ಶಾಲೆಗೆ ಹೋಗ್ತಿರಲಿಲ್ಲವಂತೆ. ಬಡತನದ ಕಾರಣ ಶಾಲೆ ಕಲಿಸಲು ಆಗ್ತಿರಲಿಲ್ಲ. ಮನೆಯಲ್ಲಿ ತಾಯಿಗೆ ಮಗಳು ನೆರವಾಗ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಸುಮಾರು ಎಂಟು ತಿಂಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಹೋದರಿ ಮೇಲೆ ಮೊದಲ ಬಾರಿ ಅತ್ಯಾಚಾರವೆಸಗಿದ್ದ ಆರೋಪಿ ನಂತ್ರ ಅನೇಕ ಬಾರಿ ಆಕೆ ಮೇಲೆ ಅತ್ಯಾಚಾರವೆಸಗಿದ್ದನಂತೆ. ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಸಿದ್ದನಂತೆ. ಮಗಳು ತಿಂಗಳು ತಿಂಗಳು ಮುಟ್ಟಾಗದ್ದನ್ನು ಗಮನಿಸಿದ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆಗ ಆಕೆ ಗರ್ಭಧರಿಸಿರುವುದು ಗೊತ್ತಾಗಿದೆ. ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...