alex Certify ಹಿಂಗಾಲುಗಳನ್ನು ಕಳೆದುಕೊಂಡ ಶ್ವಾನಕ್ಕೆ ಹೊಸ ಬದುಕು ಕೊಟ್ಟ‌ ಅಪ್ಪ-ಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂಗಾಲುಗಳನ್ನು ಕಳೆದುಕೊಂಡ ಶ್ವಾನಕ್ಕೆ ಹೊಸ ಬದುಕು ಕೊಟ್ಟ‌ ಅಪ್ಪ-ಮಗಳು

Tamil Nadu Father-daughter Duo Adopt Disabled Dog with Two Legs, Build Him a Special Wheelchair

ಹೃದಯಸ್ಪರ್ಶಿ ಘಟನೆಯೊಂದರಲ್ಲಿ ತಮಿಳುನಾಡಿನ ಕೊಯಮತ್ತೂರಿನ ಅಪ್ಪ-ಮಗಳ ಜೋಡಿಯೊಂದು ಎರಡು ಕಾಲುಗಳನ್ನು ಕಳೆದುಕೊಂಡ ನಾಲ್ಕು ವರ್ಷದ ನಾಯಿಯೊಂದನ್ನು ದತ್ತು ಪಡೆದು, ಅದಕ್ಕೊಂದು ಗಾಲಿ ಕುರ್ಚಿಯ ವ್ಯವಸ್ಥೆ ಮಾಡಿದ್ದಾರೆ.

ವೀರಾ ಹೆಸರಿನ ಈ ಶ್ವಾನದ ಪರಿಸ್ಥಿತಿ ಕಂಡು ಮುಮ್ಮಲ ಮರುಗಿದ ಕೊಯಮತ್ತೂರು ನಗರದ ನಿವಾಸಿ ಗಾಯತ್ರಿ, ತನ್ನ ತಂದೆಯೊಂದಿಗೆ ಸೇರಿಕೊಂಡು ಈ ಸಮಸ್ಯೆಗೊಂದು ಪರಿಹಾರ ಕಂಡಿಕೊಂಡಿದ್ದಾರೆ. ಅಪ್ಪ-ಮಗಳು ಇಬ್ಬರೂ ಸಹ ಇಂಜಿನಿಯರ್‌ ಆಗಿದ್ದು ತಮ್ಮ ತಾಂತ್ರಿಕ ಜ್ಞಾನವನ್ನು ಬಳಸಿಕೊಂಡು ಶ್ವಾನಕ್ಕೊಂದು ಹೊಸ ಬದುಕು ಕೊಟ್ಟಿದ್ದಾರೆ.

ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಗಾಯತ್ರಿ ವೀರಾನನ್ನು ಪ್ರಾಣಿ ದಯಾ ಸಂಘಟನೆಯ ಶೆಲ್ಟರ್‌ ಹೋಂನಲ್ಲಿ ಕಂಡೊಡನೆಯೇ ಅದರ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದಾರೆ. ಕೋವಿಡ್-19 ಸಾಂಕ್ರಮಿಕದ ಕಾರಣದ ಮನೆಯಿಂದಲೇ ಕೆಲಸ ಮಾಡುತ್ತಿರುವ ಗಾಯತ್ರಿಗೆ ತಮ್ಮ ಮುದ್ದು ಸಾಕು ಪ್ರಾಣಿಯೊಂದಿಗೆ ಕಾಲ ಕಳೆಯಲು ಸಾಕಷ್ಟು ಸಮಯಾವಕಾಶ ಸಿಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...