alex Certify ʼಸೇನಾ ದಿನʼದಂದು ಯೋಧರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೆಲ್ಯೂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೇನಾ ದಿನʼದಂದು ಯೋಧರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೆಲ್ಯೂಟ್

ಸೇನಾ ದಿವಸದಂದು ಭಾರತೀಯ ಸೇನೆಯ ಯೋಧರಿಗೆ ನಮನ ಸಲ್ಲಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸೇನಾನಿಗಳ ಧೈರ್ಯ ಸಾಹಸಗಳನ್ನು ಮೆಚ್ಚಿ ಕೊಂಡಾಡಿದ್ದಾರೆ.

ಸಿಯಾಚೆನ್‌ ನೀರ್ಗಲ್ಲಿಗೆ ಭೇಟಿ ಕೊಟ್ಟಿದ್ದ ವೇಳೆ ಸೈನಿಕರೊಬ್ಬರಿಗೆ ತಾವು ಸೆಲ್ಯೂಟ್ ಮಾಡುತ್ತಿರುವ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿರುವ ತಮ್ಮ ಖಾತೆಯಲ್ಲಿ ಶೇರ್‌ ಮಾಡಿಕೊಂಡಿರುವ ಇರಾನಿ, ಯೋಧರ ’ಸೇವೆ ಹಾಗೂ ತ್ಯಾಗಗಳಿಗೆ’ ತಾವು ಎಂದೆಂದಿಗೂ ಋಣಿ ಎಂದಿದ್ದಾರೆ.

ಸ್ವತಂತ್ರ ಭಾರತೀಯ ಸೇನೆಯ ಮೊದಲ ಕಮಾಂಡರ್‌-ಇನ್‌-ಚೀಫ್‌ ಫೀಲ್ಡ್‌ ಮಾರ್ಷಲ್ ಎಂ. ಕಾರಿಯಪ್ಪ ಅವರು ದೇಶದ ಕಡೆಯ ಬ್ರಿಟೀಷ್ ಸೇನಾ ದಂಡನಾಯಕ ಫ್ರಾನ್ಸಿಸ್ ಬುಚರ್‌ ಅವರಿಂದ ಅಧಿಕಾರ ವಹಿಸಿಕೊಂಡ ದಿನವನ್ನು ಸೇನಾ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಜನವರಿ 15, 1949ರಂದು ಕಾರಿಯಪ್ಪ ಭಾರತದ ಸೇನಾ ದಂಡನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...