ಕೊರೊನಾ ಕಾರಣದಿಂದಾಗಿ ತಿರುಪತಿ ತಿರುಮಲ ದೇಗುಲದ ದರ್ಶನ ಮಾಡಲಾಗದೇ ಬೇಸರದಲ್ಲಿರುವ ಭಕ್ತರಿಗೆ ಆಂಧ್ರ ಪ್ರದೇಶ ರಸ್ತೆ ಸಾರಿಗೆ ನಿಗಮ ಗುಡ್ ನ್ಯೂಸ್ ನೀದಿದೆ.
ತಿರುಪತಿ ಭಕ್ತರಿಗೆಂದೇ 1000 ಶೀಘ್ರ ದರ್ಶನ ಟಿಕೆಟ್ಗಳನ್ನ ಮಾರಾಟ ಮಾಡೋಕೆ ಆಂಧ್ರ ಪ್ರದೇಶ ಸಾರಿಗೆ ನಿಗಮ ನಿರ್ಧರಿಸಿದೆ.
ಈ ಸೌಲಭ್ಯವನ್ನ ಪಡೆಯಲಿಚ್ಚಿಸುವ ಭಕ್ತರು 300 ರೂಪಾಯಿ ಪಾವತಿಸಿ ಟಿಕೆಟ್ಗಳನ್ನ ಕಾಯ್ದಿರಿಸಬಹುದಾಗಿದೆ. ಶೀರ್ಘ ದರ್ಶನ ಸೌಲಭ್ಯವು ದಿನದಲ್ಲಿ ಎರಡು ಬಾರಿ ಅಂದರೆ ಬೆಳಗ್ಗೆ 11 ಹಾಗೂ ಸಂಜೆ 4 ಗಂಟೆಗೆ ಲಭ್ಯವಿರುತ್ತದೆ.
ಆಂಧ್ರ ಪ್ರದೇಶ ಸಾರಿಗೆ ನಿಗಮ ಪ್ರತಿದಿನ ಹೈದರಾಬಾದ್, ಬೆಂಗಳೂರು, ವಿಜಯವಾಡ, ವಿಶಾಖಪಟ್ಟಣಂ, ಚೆನ್ನೈ, ಪಾಂಡಿಚೆರಿ ಹಾಗೂ ರಾಜಮುಂಡ್ರಿ ಸೇರಿದಂತೆ ಹಲವೆಡೆ 650 ಬಸ್ಗಳನ್ನ ಓಡಿಸುತ್ತದೆ.
ಕೊರೊನಾ ವೈರಸ್ ಸಂಕಷ್ಟದಿಂದಾಗಿ ಕಳೆದ ವರ್ಷ ಮಾರ್ಚ್ 25ರಂದು ಬಂದ್ ಆಗಿದ್ದ ದೇವಸ್ಥಾನ ಕಳೆದ ವರ್ಷ ಜೂನ್ 11ನೇ ತಾರೀಖಿನಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಈ ದೇವಾಲಯಕ್ಕೆ ಭೇಟಿ ನೀಡಲು ಇಚ್ಚಿಸುವ ಭಕ್ತರು ತಿರುಪತಿ ದೇವಸ್ಥಾನದ ಅಧಿಕೃತ ವೆಬ್ಸೈಟ್ನಿಂದ ಮೀಸಲಾತಿ ಪಡೆಯಬಹುದಾಗಿದೆ. ದೇಗುಲಕ್ಕೆ ಭೇಟಿ ನೀಡುವ ಪ್ರತಿಯೊಬ್ಬರು ಕೊರೊನಾ ಮಾರ್ಗಸೂಚಿಗಳಂತೆ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು ಕಡ್ಡಾಯವಾಗಿ ಇರಲಿದೆ.