alex Certify
ಕನ್ನಡ ದುನಿಯಾ       Mobile App
       

Kannada Duniya

ಕೊರೊನಾ ಕುರಿತು ಕಾಶಿ ಜ್ಯೋತಿಷಿಗಳಿಂದ ಮಹತ್ವದ ಭವಿಷ್ಯ ವಾಣಿ

ಜೇಷ್ಠ ಮಾಸದ ಅಮಾವಾಸ್ಯೆಯಂದು ಶನಿ ದೇವ ಜನಿಸಿದ್ದಾನೆ. ಹಾಗಾಗಿ ಆ ದಿನವನ್ನು ಶನಿ ಜಯಂತಿಯಾಗಿ ಆಚರಿಸಲಾಗುತ್ತದೆ. ಇಂದು ಶನಿ ಜಯಂತಿಯನ್ನು ಆಚರಿಸಲಾಗುತ್ತಿದೆ. 972 ವರ್ಷಗಳ ನಂತರ ಶನಿ ಜಯಂತಿಯಂದು ವಿಶೇಷ ಯೋಗ ಬಂದಿದೆ ಎಂದು ಕಾಶಿ ಜ್ಯೋತಿಷಿಗಳು ಹೇಳಿದ್ದಾರೆ.

ಶನಿ ಜಯಂತಿ ನಂತ್ರ ಕೊರೊನಾ ಸೋಂಕು ಕಡಿಮೆಯಾಗಲಿದೆ ಎಂದವರು ಹೇಳಿದ್ದಾರೆ. ಈ ದಿನ ಬಂದಿರುವ ವಿಶೇಷ ಯೋಗದಿಂದಾಗಿ ಮುಂದಿನ ದಿನಗಳಲ್ಲಿ ಕೊರೊನಾ ಪ್ರಮಾಣ ಕಡಿಮೆಯಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಯಾವುದೇ ರೋಗ ಅಥವಾ ಪರಿವರ್ತನೆಯ ಅವಧಿಯು ಒಂದು ಗ್ರಹಣದ ಅವಧಿಯಿಂದ ಮತ್ತೊಂದು ಗ್ರಹಣದವರೆಗೆ ಇರುತ್ತದೆ. ಕೊರೊನಾ   ಡಿಸೆಂಬರ್ 26,2019 ಸೂರ್ಯಗ್ರಹಣದಿಂದ ಪ್ರಾರಂಭವಾಯಿತು, ಇದು ಮುಂದಿನ ಸೂರ್ಯಗ್ರಹಣ ಜೂನ್ 21,2020 ರವರೆಗೆ ಇರುತ್ತದೆ ಎಂದಿದ್ದಾರೆ.

972 ವರ್ಷಗಳ ನಂತರ ಮೇ 22ರ ಶನಿ ಜಯಂತಿಯಂದು ಸೂರ್ಯ, ಚಂದ್ರ, ಬುಧ ಮತ್ತು ಶುಕ್ರ ಗ್ರಹಗಳು ವೃಷಭ ರಾಶಿಯಲ್ಲಿ ಒಟ್ಟಿಗೆ ಸೇರುತ್ತಿವೆ. ಈ ವಿಶೇಷ ಯೋಗದಲ್ಲಿ  ಶನಿ ದೇವರಿಗೆ ಪ್ರಿಯವಾದ ವಸ್ತುಗಳ ದಾನ, ಪೂಜೆ ಮಾಡುವುದ್ರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...