alex Certify ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ ಪುತ್ರಿ

ಮುಂಬೈ: ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ತಮ್ಮ 23 ನೇ ಹುಟ್ಟು ಹಬ್ಬವನ್ನು ಸೋಮವಾರ ಸರಳವಾಗಿ ಆಚರಿಸಿಕೊಂಡರು.‌

ಒಂದು ಕಪ್ಪು ಡ್ರೆಸ್ ಹಾಕಿ 23 ಎಂದು ಬರೆದ ಬಲೂನ್ ಹಿಡಿದು ಮುಖ ತುಂಬ ನಗೆ ತುಂಬಿಕೊಂಡಿರುವ ಫೋಟೋವನ್ನು ಸಾರಾ ತಮ್ಮ ಇನ್ಸ್ಟಾಗ್ರಾಂ‌ ಪುಟದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದಕ್ಕೆ ಕೆಲವೇ ನಿಮಿಷಗಳಲ್ಲಿ 80 ಸಾವಿರಕ್ಕೂ ಅಧಿಕ ಲೈಕ್ ಗಳು ಬಂದಿವೆ. ಸಾಕಷ್ಟು ಜನ ಕಮೆಂಟ್ ಮಾಡಿ ಹುಟ್ಟುಹಬ್ಬಕ್ಕೆ ವಿಷ್ ಮಾಡಿದ್ದಾರೆ.‌

ಆಕೆಯ ಅಣ್ಣ ಅರ್ಜುನ್‌ ತೆಂಡುಲ್ಕರ್ ಇಬ್ಬರೂ‌‌ ಚಿಕ್ಕಂದಿನಲ್ಲಿರುವ ಫೋಟೋವೊಂದನ್ನು ಶೇರ್ ಮಾಡಿ ಹುಟ್ಟು ಹಬ್ಬದ‌ ಶುಭಾಶಯ ಕೋರಿದ್ದಾನೆ. ಸಾಕಷ್ಟು ಜನರು ತಮ್ಮ‌ ಇನ್ಸ್ಟಾಗ್ರಾಂ‌ ಸ್ಟೋರಿಯಲ್ಲಿ ಸಾರಾಗೆ ಬರ್ತಡೆ ವಿಷ್ ಮಾಡಿ ಪೋಸ್ಟ್ ಮಾಡಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡುಲ್ಕರ್ ಹಾಗೂ ಅವರ ಪತ್ನಿ ಅಂಜಲಿ ಅವರ ಪುತ್ರಿ ಸಾರಾ 1997 ರ ಅಕ್ಟೋಬರ್‌12 ರಂದು ಜನಿಸಿದ್ದಳು.‌ ಲಂಡನ್ ವಿವಿಯಿಂದ ಆಕೆ ವೈದ್ಯಕೀಯ ಪದವಿ ಪಡೆದಿದ್ದಾಳೆ.

View this post on Instagram

23??

A post shared by Sara Tendulkar (@saratendulkar) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...