alex Certify ಬಿಗ್​ ನ್ಯೂಸ್​: ‘ಕೊರೊನಾ’ಗೆ ಮತ್ತೊಂದು ಸಂಜೀವಿನಿ – ರಷ್ಯಾದ ಕೋವಿಡ್ ಲಸಿಕೆಗೆ ಕೇಂದ್ರದ ಗ್ರೀನ್‌ ಸಿಗ್ನಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್​ ನ್ಯೂಸ್​: ‘ಕೊರೊನಾ’ಗೆ ಮತ್ತೊಂದು ಸಂಜೀವಿನಿ – ರಷ್ಯಾದ ಕೋವಿಡ್ ಲಸಿಕೆಗೆ ಕೇಂದ್ರದ ಗ್ರೀನ್‌ ಸಿಗ್ನಲ್

ದೇಶದಲ್ಲಿ ಕೊರೊನಾ ವೈರಸ್​ ವಿರುದ್ಧ ಲಸಿಕೆಯ ಹೋರಾಟ ಮುಂದುವರಿದಿದ್ದು ಈ ಹೋರಾಟಕ್ಕೆ ಇದೀಗ ಮತ್ತೊಂದು ಬಲ ಸೇರಿದೆ. ಇಷ್ಟು ದಿನಗಳ ಕಾಲ ಕೋವಿಶೀಲ್ಡ್​ ಹಾಗೂ ಕೋವ್ಯಾಕ್ಸಿನ್​ ಲಸಿಕೆಗಳನ್ನ ನೀಡುತ್ತಿದ್ದ ಕೇಂದ್ರ ಸರ್ಕಾರ ಇದೀಗ ದೇಶದಲ್ಲಿ ಮತ್ತೊಂದು ಲಸಿಕೆಯ ಬಳಕೆಗೆ ಅನುಮತಿ ನೀಡಿದೆ.

ಕೇಂದ್ರ ಸರ್ಕಾರದ ಔಷಧ ನಿಯಂತ್ರಣ ಪ್ರಾಧಿಕಾರ ಈ ಸಂಬಂಧ ಸಭೆ ನಡೆಸಿದ್ದು ಸಭೆಯಲ್ಲಿ ರಷ್ಯಾದ ʼಸ್ಪುಟ್ನಿಕ್​ ವಿʼ ಲಸಿಕೆಯನ್ನ ದೇಶದಲ್ಲಿ ತುರ್ತು ಬಳಕೆ ಮಾಡಲು ಅನುಮೋದನೆ ನೀಡಿದೆ.

ಸ್ಪುಟ್ನಿಕ್​ ವಿ ಲಸಿಕೆಯನ್ನ ಭಾರತದಲ್ಲಿ ಬಳಕೆಗೆ ತುರ್ತು ಅನುಮೋದನೆ ಕೋರಿ ಡಾ. ರೆಡ್ಡೀಸ್​ ಲ್ಯಾಬೋರೇಟರಿ ಅನುಮತಿ ಕೇಳಿತ್ತು. ರಷ್ಯಾದ ಈ ಲಸಿಕೆಯನ್ನ ಭಾರತ, ರಷ್ಯಾ, ಯುಎಇ ಸೇರಿದಂತೆ ವಿವಿಧೆಡೆ ಪ್ರಾಯೋಗಿಕ ಪರೀಕ್ಷೆಯನ್ನ ನಡೆಸಲಾಗಿದೆ. ಇಲ್ಲಿಯವರೆಗೆ ಕೊರೊನಾ ವಿರುದ್ಧ 91.6 ಪ್ರತಿಶತ ಪರಿಣಾಮಕಾರತ್ವವನ್ನ ತೋರಿಸಿದೆ. ರಷ್ಯಾ ಡೈರೆಕ್ಟ್​ ಇನ್​ವೆಸ್ಟ್​​ಮೆಂಟ್​ ಫಂಡ್​ ಜೊತೆ ಡಾ. ರೆಡ್ಡಿಸ್​​ ಸಹಭಾಗಿತ್ವ ಹೊಂದಿದೆ.
ರಷ್ಯಾ ಸ್ಪುಟ್ನಿಕ್​ ವಿ ಲಸಿಕೆಯ ಸಾರ್ವಜನಿಕ ಬಳಕೆಗೆ ಆಗಸ್ಟ್​ ತಿಂಗಳಲ್ಲಿ ನೋಂದಾಯಿಸಿತ್ತು.

ಭಾರತದಲ್ಲಿ ಇಲ್ಲಿಯವರೆಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ ಲಸಿಕೆಗಳನ್ನ ಬಳಕೆ ಮಾಡಲಾಗುತ್ತಿತ್ತು. ದೇಶದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ನಡೆಯುತ್ತಿದ್ದು ಈ ಸಮಯದಲ್ಲೇ ಭಾರತದ ವಿವಿಧ ರಾಜ್ಯಗಳಲ್ಲಿ ಲಸಿಕೆ ಅಭಾವ ಕಾಣಿಸಿಕೊಳ್ತಿದೆ. ಈ ಸಮಸ್ಯೆಯನ್ನ ತಡೆಗಟ್ಟಲಿಕ್ಕೋಸ್ಕರ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...