ಸಾಕಷ್ಟು ಬಾರಿ ಕಡುಬಡವರು ಎಂದು ಕರೆಯಲ್ಪಡುವ ಜನರು ಮಾನವೀಯತೆಯಲ್ಲಿ ಸಿರಿವಂತಿಕೆ ಮೆರೆದ ಅದೆಷ್ಟೋ ನಿದರ್ಶನಗಳನ್ನು ಕಂಡಿದ್ದೇವೆ. ಇಂಥದ್ದೊಂದು ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇರ್ ಮಾಡಿಕೊಂಡಿದ್ದಾರೆ.
ಭಿಕ್ಷುಕರೊಬ್ಬರು ತಮ್ಮ ತಟ್ಟೆಯಲ್ಲಿದ್ದ ಊಟವನ್ನು ಬೀದಿ ನಾಯಿಗಳಿಗೆ ಹಾಕುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ತನ್ನ ತಟ್ಟೆಯಲ್ಲೇ ಆ ನಾಯಿಗಳು ಊಟ ಮಾಡುತ್ತಿದ್ದರೆ, ಭಿಕ್ಷುಕ ಅದರ ಪಕ್ಕ ಕುಳಿತಿರುವುದನ್ನು ಕಾಣಬಹುದಾಗಿದೆ.
”ದುಡ್ಡಿನಲ್ಲಿ ಬಡವ, ಹೃದಯದಲ್ಲಿ ಅತ್ಯಂತ ಸಿರಿವಂತ,” ಎಂದು ಪೋಸ್ಟಿನಲ್ಲಿ ಕ್ಯಾಪ್ಷನ್ ಹಾಕಿದ್ದಾರೆ ನಂದಾ.