alex Certify ಸಾಮಾಜಿಕ ಜಾಲತಾಣಗಳ ತುಂಬಾ ’ಜೈ ಶ್ರೀರಾಮ್, ಜೈ ಭಜರಂಗಬಲಿ’ಯದ್ದೇ ಸದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಜಾಲತಾಣಗಳ ತುಂಬಾ ’ಜೈ ಶ್ರೀರಾಮ್, ಜೈ ಭಜರಂಗಬಲಿ’ಯದ್ದೇ ಸದ್ದು

ರಾಮ ಮಂದಿರದ ಶಿಲಾನ್ಯಾಸ ನೆರವೇರಿಸಿದ ಸುದಿನದಂದು ಇಡೀ ದೇಶವಾಸಿಗಳು ಸಂಭ್ರಮದ ಮೂಡ್‌ನಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚಟುವಟಿಕೆಗಳು ಕಂಡುಬಂದವು.

ಭೂಮಿ ಪೂಜೆ ಕಾರ್ಯಕ್ರಮವು ನೆರವೇರಲು ಕ್ಷಣಗಣನೆ ಆರಂಭವಾದಾಗಿನಿಂದ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶ್ರೀರಾಮ ಚಂದ್ರರ ಭಕ್ತಗಣದ ಉತ್ಸಾಹದ ಮಟ್ಟ ತಾರಕಕ್ಕೇರಿತ್ತು. ಇದೇ ಖುಷಿಯಲ್ಲಿ ಜನರು ವಿವಿಧ ಆರ್ಟ್ ವರ್ಕ್, ಕ್ಯಾನವಾಸ್, ಡಿಜಿಟಲ್ ಆರ್ಟ್ ಸೇರಿದಂತೆ ಅನೇಕ ಬಗೆಯ ಚಿತ್ರಗಳನ್ನು ಟ್ವಿಟರ್‌ ಹಾಗೂ ಫೇಸ್ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

#JaiShriRam #RamMandirAyodhya #ShreeRam #5thAugustGoldenDay #Ayodhya #AyodhyaBhoomipoojan #JaiSiyaRam ಸೇರಿದಂತೆ ಪ್ರಭು ಶ್ರೀರಾಮಚಂದ್ರರ ಹೆಸರಿನಲ್ಲಿ ಅನೇಕ ಹ್ಯಾಶ್‌ಟ್ಯಾಗ್‌ಗಳು ಭಾರೀ ಸದ್ದು ಮಾಡಿದವು. ಇದೇ ವೇಳೆ ಭಜರಂಗಬಲಿಯ ಹೆಸರಿನಲ್ಲೂ ಭಾರೀ ಸಂಖ್ಯೆಯಲ್ಲಿ ಟ್ವೀಟ್‌ಗಳು ಹಾಗೂ ಪೋಸ್ಟ್‌ಗಳು ಸದ್ದು ಮಾಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...