alex Certify ಸ್ನೇಹಿತನಿಗೆ ಪತ್ನಿಯನ್ನೇ ಬಿಟ್ಟುಕೊಟ್ಟು ಕಾವಲು ನಿಂತ ಪಾಪಿ ಪತಿರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನಿಗೆ ಪತ್ನಿಯನ್ನೇ ಬಿಟ್ಟುಕೊಟ್ಟು ಕಾವಲು ನಿಂತ ಪಾಪಿ ಪತಿರಾಯ

ಆಲ್ವಾರ್: ರಾಜಸ್ಥಾನದ ಆಳ್ವಾರ್ ಶಹಜಾಹನ್ ಪುರ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೃತ್ಯಕ್ಕೆ ಸಂತ್ರಸ್ತೆಯ ಗಂಡನೇ ಸಹಕಾರ ನೀಡಿದ್ದಾನೆ.

ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಜೂನ್ 4 ರಂದು ದೂರು ದಾಖಲಾಗಿ ಬುಧವಾರ ಆರೋಪಿಗಳನ್ನು ಬಂಧಿಸಲಾಗಿದೆ. 35 ವರ್ಷದ ಸಂತ್ರಸ್ತೆಯನ್ನು ಮಾರುಕಟ್ಟೆಗೆ ಹೋಗೋಣವೆಂದು ಪತಿ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಾನೆ.

ದಾರಿ ಮಧ್ಯದಲ್ಲಿ ತನ್ನ ಸ್ನೇಹಿತನನ್ನು ಬೈಕ್ ನಲ್ಲಿ ಕೂರಿಸಿಕೊಂಡಿದ್ದಾನೆ. ಸ್ವಲ್ಪ ದೂರದಲ್ಲಿದ್ದ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿದ್ದು, ಸ್ವಲ್ಪ ಸಮಯದ ನಂತರ ಮಹಿಳೆಯನ್ನು ಸಮೀಪದಲ್ಲಿದ್ದ ಕೊಠಡಿಗೆ ಎಳೆದೊಯ್ದ ಗಂಡನ ಸ್ನೇಹಿತ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಪತಿ ಕೋಲು ಹಿಡಿದುಕೊಂಡು ಹೊರಗೆ ಕಾವಲು ನಿಂತಿದ್ದ ಎಂದು ಮಹಿಳೆ ಹೇಳಿದ್ದಾಳೆ.

ಅತ್ಯಾಚಾರದ ನಂತರ ಪತಿ ಹಾಗೂ ಆತನ ಸ್ನೇಹಿತ ಮಹಿಳೆಗೆ ಕೊಲೆ ಬೆದರಿಕೆ ಹಾಕಿದ್ದು ತವರಿಗೆ ಹೋದ ಮಹಿಳೆ ತಂದೆಯ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...