alex Certify BIG NEWS: ಲಾಕ್ ಡೌನ್ ಗೂ ಮುನ್ನ ರೈಲ್ವೆ ಟಿಕೆಟ್ ಕಾಯ್ದಿರಿಸಿದ್ದವರಿಗೆ ಹಣ ವಾಪಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಾಕ್ ಡೌನ್ ಗೂ ಮುನ್ನ ರೈಲ್ವೆ ಟಿಕೆಟ್ ಕಾಯ್ದಿರಿಸಿದ್ದವರಿಗೆ ಹಣ ವಾಪಸ್

ಲಾಕ್‌ಡೌನ್ ಗೂ ಮುನ್ನ ರೈಲ್ವೆ ಟಿಕೆಟ್ ಬುಕ್ ಮಾಡಿದವರಿಗೊಂದು ನೆಮ್ಮದಿ ಸುದ್ದಿಯಿದೆ. ರೈಲ್ವೆ ಟಿಕೆಟ್ ಕೌಂಟರ್ ಮೂಲಕ ರೈಲು ಟಿಕೆಟ್ ಕಾಯ್ದಿರಿಸಿದ್ದರೆ, ಈಗ ಅದನ್ನು  ವಾಪಸ್ ಪಡೆಯಬಹುದಾಗಿದೆ. ರೈಲ್ವೆ ಸೇವೆಗಳನ್ನು ಮುಚ್ಚಿದ್ದ ಕಾರಣ  ಅನೇಕ ರೈಲುಗಳನ್ನು ರದ್ದುಪಡಿಸಲಾಗಿದೆ. ಆ ರೈಲುಗಳ ಟಿಕೆಟ್ ಹಣವನ್ನು ಇಲಾಖೆ ಈಗ ವಾಪಸ್ ಮಾಡ್ತಿದೆ.

ಟಿಕೆಟ್ ಮೀಸಲಾತಿ ಕೇಂದ್ರಕ್ಕೆ ಹೋಗಿ ಪ್ರಯಾಣಿಕರು ಹಣ ಪಡೆಯಬಹುದು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ  ದಿನಾಂಕಗಳಿಗೆ ಅನುಗುಣವಾಗಿ ಟಿಕೆಟ್ ಹಣ ವಾಪಸ್ ಪಡೆಯಬೇಕು. ದೇಶದ ಯಾವುದೇ ರಿಸರ್ವೇಶನ್ ಕೇಂದ್ರಕ್ಕೆ ಹೋಗಿ ಟಿಕೆಟ್ ತೋರಿಸಿ ಹಣ ಪಡೆಯಬಹುದು.  ನಗದು ರೂಪದಲ್ಲಿ ಹಣ ನೀಡಲಾಗುತ್ತದೆ. ಕೆಲವು ಕಾರಣಗಳಿಗಾಗಿ ನಿಗದಿತ ಅವಧಿಯೊಳಗೆ ಮರು ಪಾವತಿ ಪಡೆಯಲು ಸಾಧ್ಯವಾಗದವರಿಗೆ  180 ದಿನಗಳ ಅವಕಾಶ ನೀಡಲಾಗಿದೆ.

ಮಾರ್ಚ್ 22 ರಿಂದ ಜೂನ್ 30 ರವರೆಗೆ ಪ್ರಯಾಣಿಸಲು ಕಾಯ್ದಿರಿಸಿದ ಟಿಕೆಟ್‌ಗಳಿಗೆ ಹಣವನ್ನು ಹಿಂದಿರುಗಿಸಲು ನಿರ್ಧರಿಸಲಾಗಿದೆ. ಮಾರ್ಚ್ 22 ರಿಂದ 31 ರವರೆಗೆ ಟಿಕೆಟ್ ಕಾಯ್ದಿಸಿದ್ದವರು ಸೋಮವಾರದಿಂದ ತಮ್ಮ ಹಣ ವಾಪಸ್ ಪಡೆಯಬಹುದು. ಏಪ್ರಿಲ್ 1 ರಿಂದ 14 ರವರೆಗಿನ ಪ್ರಯಾಣಿಕರು ಜೂನ್ 1 ರಿಂದ ಮರು ಪಾವತಿ ತೆಗೆದುಕೊಳ್ಳಬಹುದು.

ಏಪ್ರಿಲ್ 15 ರಿಂದ 30 ರವರೆಗೆ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸುವ ಜನರು ಜೂನ್ 7 ರಿಂದ ತಮ್ಮ ಹಣವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಮೇ 1 ರಿಂದ 15 ರವರೆಗೆ ಪ್ರಯಾಣಿಸಲು ಕಾಯ್ದಿರಿಸಿದ ಟಿಕೆಟ್‌ಗಳ ಮೊತ್ತವನ್ನು ಜೂನ್ 14 ರಿಂದ ಹಿಂತಿರುಗಿಸಲಾಗುತ್ತದೆ. ಮೇ 16 ರಿಂದ 30 ರವರೆಗೆ ಟಿಕೆಟ್ ಕಾಯ್ದಿರಿಸಿದ್ದವರು ಜೂನ್ 21 ರಿಂದ ತಮ್ಮ ಮೊತ್ತವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಜೂನ್ 1 ರಿಂದ 30 ರವರೆಗೆ ಪ್ರಯಾಣಿಸುವ ಟಿಕೆಟ್ ಪಡೆವರು ಜೂನ್ 28 ರಿಂದ ಹಣವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...