alex Certify ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಯುದ್ಧ ಕಹಳೆ, ಗಡಿ ಬಳಿ ಭಾರತೀಯ ಸೇನೆ ಜಮಾವಣೆ: ಪ್ರಧಾನಿ ಮೋದಿ ತುರ್ತು ಸಭೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಯುದ್ಧ ಕಹಳೆ, ಗಡಿ ಬಳಿ ಭಾರತೀಯ ಸೇನೆ ಜಮಾವಣೆ: ಪ್ರಧಾನಿ ಮೋದಿ ತುರ್ತು ಸಭೆ

ದೇಶದ ಸಾರ್ವಭೌಮತೆಯ ರಕ್ಷಣೆಗೆ ಯುದ್ಧಕ್ಕೆ ಸಿದ್ಧವಾಗಿರುವಂತೆ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆದೇಶ ನೀಡಿದ್ದಾರೆ.

ಭಾರತದೊಂದಿಗೆ ಗಡಿ ವಿವಾದ, ಅಮೆರಿಕದೊಂದಿಗೆ ಕೋರೋನಾ ಬಿಕ್ಕಟ್ಟು, ತೈವಾನ್ ಮೇಲೆ ಅಧಿಪತ್ಯ ಸ್ಥಾಪಿಸುವ ಚೀನಾ ಪ್ರಯತ್ನದ ಪ್ರಸ್ತುತ ಸಂದರ್ಭದಲ್ಲಿ ಕ್ಸಿ ಜಿನ್ ಪಿಂಗ್ ಯುದ್ಧಕ್ಕೆ ಸಿದ್ಧರಾಗುವಂತೆ ಕರೆ ನೀಡಿರುವುದು ವಿಶ್ವದ ಗಮನ ಸೆಳೆದಿದೆ.

ಇತ್ತ ಚೀನಾಗೆ ಸೆಡ್ಡು ಹೊಡೆಯಲು ಭಾರತ ಕೂಡ ಸಜ್ಜಾಗಿದ್ದು ಗಡಿಯಲ್ಲಿ ಸೇನೆಯನ್ನು ಜಮಾವಣೆ ಮಾಡಲಾಗಿದೆ. ಪ್ರಧಾನಿ ಮೋದಿ ಸೇನೆಯ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. 1962 ರ ನಂತರದಲ್ಲಿ ಭಾರತ ಮತ್ತು ಚೀನಾ ನಡುವೆ ಅತಿ ದೊಡ್ಡ ಸಂಘರ್ಷ ಶುರುವಾದಂತಿದೆ ಎಂದು ಮಾಧ್ಯಮಗಳಲ್ಲಿ ವಿಶ್ಲೇಷಣೆಯಾಗಿದೆ. ಚೀನಾದ ಯಾವುದೇ ಪ್ರತಿರೋಧವನ್ನು ಎದುರಿಸಲು ಸಜ್ಜಾಗಿರುವುದಾಗಿ ಭಾರತ ಹೇಳಿದ್ದು, ಪ್ರಧಾನಿ ಮೋದಿ ಈ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...