alex Certify ಬಿಡೆನ್‌ ಮೇಣದ ಪ್ರತಿಮೆ ರಚಿಸಿದ ಲೂಧಿಯಾನಾ ಕಲಾವಿದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡೆನ್‌ ಮೇಣದ ಪ್ರತಿಮೆ ರಚಿಸಿದ ಲೂಧಿಯಾನಾ ಕಲಾವಿದ

ಲೂಧಿಯಾನಾದ ಪ್ರಭಾಕರ್‌ ಮೇಣದ ವಸ್ತು ಸಂಗ್ರಹಾಲಯದಲ್ಲಿ ಅಮೆರಿಕ ನೂತನ ಅಧ್ಯಕ್ಷ ಜೋ ಬಿಡೆನ್ ಅವರ ಪ್ರತಿಮೆ ಅನಾವರಣ ಮಾಡಲಾಗಿದೆ.

ಕಲಾವಿದ ಚಂದ್ರಶೇಖರ್‌ ಪ್ರಭಾಕರ್‌ ಈ ಕಲಾಕೃತಿ ರಚಿಸಿದ್ದು, ಅಮೆರಿಕದ ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದ್ದಾರೆ. ಬಿಡೆನ್ ಅಧಿಕಾರಾವಧಿಯಲ್ಲಿ ಭಾರತ-ಅಮೆರಿಕ ಸಂಬಂಧ ಇನ್ನಷ್ಟು ಸುಧಾರಿಸಲಿ ಎಂದು ಪ್ರಭಾಕರ್‌ ಆಶಿಸಿದ್ದಾರೆ.

2005ರಲ್ಲಿ ಹೃದಯ ಶಸ್ತ್ರಚಿಕಿತ್ಸೆ ಆದ ಬಳಿಕ ಸುಮ್ಮನೇ ಕುಳಿತಿರಬಾರದು ಎಂದುಕೊಂಡು ಮೇಣದಲ್ಲಿ ಪ್ರತಿಮೆಗಳನ್ನು ರಚಿಸುವ ಕೆಲಸ ಶುರುವಿಟ್ಟುಕೊಂಡರು ಪ್ರಭಾಕರ್‌. 2ಡಿ ಫೋಟೋಗಳನ್ನು ಬಳಸಿಕೊಂಡು ಮೇಣದ ಪ್ರತಿಮೆಗಳನ್ನು ಸೃಷ್ಟಿಸುವ ಪ್ರಭಾಕರ್‌, ಪ್ರತಿಯೊಂದಕ್ಕೂ ತಮ್ಮದೇ ಜೇಬಿನಿಂದ ಹಣ ಖರ್ಚು ಮಾಡುತ್ತಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮದರ್‌ ತೆರೇಸಾ, ಬರಾಕ್ ಒಬಾಮಾ, ಸಚಿನ್ ತೆಂಡೂಲ್ಕರ್‌, ಮೈಕೆಲ್ ಜಾಕ್ಸನ್, ಕಪಿಲ್ ಶರ್ಮಾ ಸೇರಿದಂತೆ ಅನೇಕರ ಲೈಫ್‌ ಸೈಜ್ ಕಲಾಕೃತಿಗಳನ್ನು ಪ್ರಭಾಕರ್‌ ಒಬ್ಬರೇ ಕೆತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...