alex Certify ರೈತರು ಕೇಂದ್ರ ಸರ್ಕಾರದ ನಿಲುವನ್ನ ಅರ್ಥ ಮಾಡಿಕೊಳ್ತಾರೆ – ನಿತಿನ್ ಗಡ್ಕರಿ‌ ವಿಶ್ವಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರು ಕೇಂದ್ರ ಸರ್ಕಾರದ ನಿಲುವನ್ನ ಅರ್ಥ ಮಾಡಿಕೊಳ್ತಾರೆ – ನಿತಿನ್ ಗಡ್ಕರಿ‌ ವಿಶ್ವಾಸ

ಹಿಂದೂಸ್ತಾನ್ ಟೈಮ್ಸ್ ಲೀಡರ್​ ಶಿಪ್​ ಶೃಂಗಸಭೆ 2020ರ ಎರಡನೇ ಹಾಗೂ ಬಹುನಿರೀಕ್ಷಿತ ಅಧಿವೇಶನದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ, ಸೂಕ್ಷ್ಮ, ಸಣ್ಣ ಮತ್ತು ಉದ್ಯಮಗಳ ಸಚಿವ ನಿತೀನ್​ ಗಡ್ಕರಿ ಭಾಗಿಯಾಗಿದ್ದಾರೆ.

ಪ್ರತಿಷ್ಠಿತ ಶೃಂಗಸಭೆಯ 18ನೇ ಅಧಿವೇಶನವು ಜಾಗತಿಕ ನಾಯಕರನ್ನ ಒಟ್ಟುಗೂಡಿಸುವ ಹಾಗೂ ಭಾರತ ಮತ್ತು ಪ್ರಪಂಚದ ಮುಂದಿನ ಸವಾಲು ಏನೆಂಬುದರ ಬಗ್ಗೆ ನೀಲ ನಕ್ಷೆಯನ್ನ ಬಿಡಿಸಿಟ್ಟಿದೆ.

ಈ ಶೃಂಗಸಭೆಯಲ್ಲಿ ಭಾಗಿಯಾದ ನಿತಿನ್​ ಗಡ್ಕರಿ, 60 ವರ್ಷ ಮೇಲ್ಪಟ್ಟ ಜನರು ಹೆಚ್ಚು ಜಾಗರೂಕರಾಗಿರಬೇಕು. ಕೆಲ ಸಮಯದಲ್ಲೇ ನಾವು ಕೊರೊನಾ ವಿರುದ್ಧದ ಲಸಿಕೆ ಪಡೆಯಲಿದ್ದೇವೆ ಎಂಬ ನಂಬಿಕೆ ಇದೆ. ಆತ್ಮವಿಶ್ವಾಸದಿಂದಲೇ ನಾವು ಕೊರೊನಾ ವಿರುದ್ಧದ ಯುದ್ಧವನ್ನ ಗೆಲ್ಲುತ್ತೇವೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಇನ್ನು ಇದೇ ವೇಳೆ ರೈತ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವ್ರು, ರೈತರು ತಮ್ಮ ಬೆಳೆಗೆ ಸೂಕ್ತ ಬೆಲೆಯನ್ನೇ ಪಡೆಯಲಿದ್ದಾರೆ. ರೈತರ ಹಿತದೃಷ್ಟಿಯನ್ನ ಗಮನದಲ್ಲಿಟ್ಟುಕ್ಕೊಂಡೇ ಈ ಸುಧಾರಣೆ ಮಾಡಲಾಗಿದೆ. ಆದರೆ ಕೆಲವರು ಬೇಕಂತಲೇ ರೈತರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಆದರೆ ರೈತರು ಸದ್ಯದಲ್ಲೇ ಇವೆಲ್ಲವನ್ನ ಅರ್ಥ ಮಾಡಿಕೊಂಡು ನಮಗೆ ಬೆಂಬಲ ನೀಡುತ್ತಾರೆಂಬ ನಂಬಿಕೆಯಿದೆ ಅಂತಾ ಹೇಳಿದ್ರು.

ಮುಂದಿನ 5 ವರ್ಷಗಳಲ್ಲಿ ಭಾರತದ ಜಿಡಿಪಿಗೆ ಶೇಕಡಾ 30 ರಿಂದ 40ರಷ್ಟು ಕೊಡುಗೆಯನ್ನ ಎಂಎಸ್​​ಎಂಇಗಳು ನೀಡಲಿವೆ. ಭಾರತದಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 130 ಪ್ರತಿಶತ ಏರಿಕೆಯಾಗಿದೆ. ಜನರು ಎಲೆಕ್ಟ್ರಿಕ್​ ವಾಹನಗಳನ್ನ ಖರೀದಿಸಲು ಮೋದಿ ಸರ್ಕಾರ ಪ್ರೋತ್ಸಾಹ ನೀಡುತ್ತದೆ ಅಂತಾನೂ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...