alex Certify ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳುವ ಮೂಲಕ ‘ಅಚ್ಚರಿ’ ಮೂಡಿಸಿದ ಕಾಂಗ್ರೆಸ್ ಹಿರಿಯ ನಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳುವ ಮೂಲಕ ‘ಅಚ್ಚರಿ’ ಮೂಡಿಸಿದ ಕಾಂಗ್ರೆಸ್ ಹಿರಿಯ ನಾಯಕ

ಪ್ರಧಾನಿ ನರೇಂದ್ರ ಮೋದಿಯವರನ್ನು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹಾಡಿ ಹೊಗಳುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಗುಲಾಮ್ ನಬಿ ಆಜಾದ್ ಈ ಹೇಳಿಕೆ ನೀಡಿದ್ದು, ಮೋದಿಯವರು ಅಹಂಕಾರ ಇಲ್ಲದ ಸರಳ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

ಜಮ್ಮುವಿನಲ್ಲಿ ಭಾನುವಾರ ನಡೆದ ಗುಜ್ಜರ್ ಸಮಾವೇಶದಲ್ಲಿ ಮಾತನಾಡಿದ ಗುಲಾಮ್ ನಬಿ ಆಜಾದ್, ಒಬ್ಬ ಚಾಯ್ವಾಲಾ ಆಗಿ ಉನ್ನತ ಹುದ್ದೆಯಾದ ಪ್ರಧಾನಿ ಸ್ಥಾನಕ್ಕೆ ಏರಿದರೂ ಸಹ ನರೇಂದ್ರ ಮೋದಿಯವರು ತಮ್ಮ ಬೇರು ಮರೆತಿಲ್ಲ ಎಂದು ಹೇಳಿದ್ದಲ್ಲದೆ, ಅವರು ಎಲ್ಲರಿಗೂ ಮಾದರಿ ಎಂದು ತಿಳಿಸಿದ್ದಾರೆ.

ಜನನಾಯಕರು ಚಂಬಲ್ ಕಣಿವೆ ಡಕಾಯಿತರಿಗಿಂತಲೂ ಹೆಚ್ಚು ಡೇಂಜರ್: ಸಿದ್ದರಾಮಯ್ಯ ವಿರುದ್ಧ ಪಲಿಮಾರು ಶ್ರೀ ಆಕ್ರೋಶ

ರಾಜ್ಯಸಭಾ ಸದಸ್ಯರಾಗಿದ್ದ ಗುಲಾಮ್ ನಬಿ ಆಜಾದ್ ಕೆಲ ದಿನಗಳ ಹಿಂದೆ ನಿವೃತ್ತಿ ಹೊಂದುವ ಸಂದರ್ಭದಲ್ಲಿ ಮಾತನಾಡಿದ್ದ ನರೇಂದ್ರ ಮೋದಿಯವರೂ ಸಹ ತಮ್ಮ ಭಾಷಣದಲ್ಲಿ ಗುಲಾಮ್ ನಬಿ ಆಜಾದ್ ಅವರ ಕಾರ್ಯವೈಖರಿಯನ್ನು ಸ್ಮರಿಸಿದ್ದಲ್ಲದೆ ತಮ್ಮ ಉತ್ತಮ ಸ್ನೇಹಿತ ಎಂದು ಹೇಳಿಕೊಂಡಿದ್ದರು. ಅಲ್ಲದೆ ಒಂದು ಹಂತದಲ್ಲಿ ನರೇಂದ್ರ ಮೋದಿ ಭಾವುಕರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...