alex Certify ನಟನ‌ ಸಾವಿನ ಕುರಿತು ಜೋಕ್ ಮಾಡಿದ ಕಮೆಡಿಯನ್‌ ಗೆ ನೆಟ್ಟಿಗರ ತರಾಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟನ‌ ಸಾವಿನ ಕುರಿತು ಜೋಕ್ ಮಾಡಿದ ಕಮೆಡಿಯನ್‌ ಗೆ ನೆಟ್ಟಿಗರ ತರಾಟೆ

Mumbai-based Comedian Gets Social Media Threats for Jokes on Sushant Singh Rajput, Mental Health

ಹಿಂದೂ ದೇವತೆಗಳ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿ ವಿವಾದ ಸೃಷ್ಟಿಸಿದ ಸ್ಟಾಂಡ್‌-ಅಪ್ ಕಮೆಡಿಯನ್ ಮುನಾವರ್‌ ಫರೂಕಿ ಪ್ರಕರಣದ ಬಳಿಕ ಇದೀಗ ಮತ್ತೊಬ್ಬ ಸ್ಟಾಂಡ್-ಅಪ್ ಕಮೆಡಿಯನ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿವಾದಕ್ಕೆ ಗುರಿಯಾಗಿದ್ದಾರೆ.

ಬಾಲಿವುಡ್ ನಟ ಸುಶಾಂತ್‌ ಸಿಂಗ್ ರಜಪೂತ್ ಸಾವಿನ‌ ಬಗ್ಗೆ ಜೋಕ್ ಮಾಡಿದ ಕಾರಣಕ್ಕೆ ಕಾಮೆಡಿಯನ್ ಡೇನಿಯಲ್ ಫರ್ನಾಂಡಿಸ್ ಭಾರೀ ವಿರೋಧ ಎದುರಿಸುತ್ತಿದ್ದಾರೆ. ಈತನ ಕಾಮಿಡಿಯ ಕ್ಲಿಪ್‌ಗಳು ಯೂಟ್ಯೂಬ್‌ನಲ್ಲಿ ವೈರಲ್ ಆಗಿದ್ದು, ಮುಂಬೈ ಮೂಲದ ಕಲಾವಿದನ ಬ್ಯಾಡ್ ಟೇಸ್ಟ್‌ ಕಾಮಿಡಿ ನೆಟ್ಟಿಗರನ್ನು ಸಿಟ್ಟಿಗೆಬ್ಬಿಸಿದೆ. ಸುಶಾಂತ್‌ ಸಿಂಗ್ ರಜಪೂತ್‌ ಸಾವು ಹಾಗೂ ಆತನ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಬಂಧನದ ಬಗ್ಗೆ ದೇಶದ ಕುತೂಹಲ ಹೆಚ್ಚಿದ್ದ ವಿಚಾರವಾಗಿ ಜೋಕ್ ಮಾಡಿದ್ದರು ಫರ್ನಾಂಡಿಸ್.

ಸುಶಾಂತ್‌ ಮಾನಸಿಕ ಸ್ವಾಸ್ಥ್ಯದ ಬಗ್ಗೆಯೂ ಸಹ ಫರ್ನಾಂಡಿಸ್‌ ಲೇವಡಿ ಮಾಡುತ್ತಿರುವುದನ್ನು ಸ್ಕಿಟ್‌ಗಳಲ್ಲಿ ನೋಡಬಹುದಾಗಿದೆ. ದುರಂತಗಳ ಮೇಲೆ ಕಾಮಿಡಿ ಮಾಡುವುದಕ್ಕಿಂತ ಕೆಟ್ಟ ವಿಚಾರ ಮತ್ತೊಂದಿಲ್ಲ ಎಂದು ನೆಟ್ಟಿಗರು ಈ ಕಾಮೆಡಿಯನ್‌ಅನ್ನು ತರಾಟೆಗೆ ತೆಗೆದುಕೊಂಡು ತಮ್ಮ ಅಸಮಾಧಾನವನ್ನು ಟ್ವಿಟ್‌ಗಳ ಮೂಲಕ ಹೊರಹಾಕುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
http://divna.freepage.cz/oftalmologie/ https://bgmarathon.cz/?topic=nejlepsi-metody-obnovy-zraku-po-operacich-oci-v-cesku http://www.amkhorice.cz/forum/topic728-prevence-glaukomu-v-cesku-zakladni-opatreni.html https://console-forum.net/tema/1122729-inovativn%C3%AD-metody-diagnostiky-a-l%C3%A9%C4%8Dby-keratokonusu-v-%C4%8Desku/ https://olomouc.hnutiduha.cz/nase-aktivity/ekoporadna/forum/ostatni/ucinna-lecba-herpeticke-keratitidy-v-cesku/ https://www.phpbb.cz/viewtopic.php?t=24501 https://diskuse.jakpsatweb.cz/?action=vthread&forum=2&topic=174770