alex Certify ಮರಿಗಾಗಿ ಮಿಡಿದ ಜಿರಾಫೆಯ ಮಾತೃ ಹೃದಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಿಗಾಗಿ ಮಿಡಿದ ಜಿರಾಫೆಯ ಮಾತೃ ಹೃದಯ

ಪ್ರಾಣಿಗಳಲ್ಲೂ ತಾಯಿಪ್ರೇಮ ಉಕ್ಕಿ ಹರಿಯುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಮರಿಯನ್ನು ಸುತ್ತುವರಿಯಲು ಬಂದ ಚಿರತೆಯ ದಂಡನ್ನು ತಾಯಿ ಜಿರಾಫೆ ಬೆದರಿಸಿ ಓಡಿಸಿದ ವಿಡಿಯೋ ಈಗ ವೈರಲ್ ಆಗಿದೆ.

ಐಎಫ್ಎಸ್ ಅಧಿಕಾರಿ ಸುಸಾಂತ್ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ 33 ಸೆಕೆಂಡಿನ ಈ ವಿಡಿಯೋ ಹಂಚಿಕೊಂಡಿದ್ದು, 4 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಹುಲ್ಲುಗಾವಲಿನಂತಹ ಪ್ರದೇಶದಲ್ಲಿ ತನ್ನ ಮರಿಯೊಂದಿಗೆ ಸ್ವಚ್ಛಂದವಾಗಿದ್ದ ಜಿರಾಫೆಯತ್ತ ಚಿರತೆಗಳ ಗುಂಪೊಂದು ಬರುವುದನ್ನು ತಾಯಿ ಜಿರಾಫೆ ಗಮನಿಸುತ್ತದೆ. ತಕ್ಷಣವೇ ಮರಿಯ ರಕ್ಷಣೆಗಾಗಿ ಮಡಿಲಲ್ಲಿ ಇಟ್ಟುಕೊಳ್ಳುವ ಜಿರಾಫೆ, ಹೆದರಬೇಡ, ನಾನಿದ್ದೇನೆ ಎನ್ನುವಂತೆ ಧೈರ್ಯ ತುಂಬುತ್ತದೆ.

ಚಿರತೆಗಳು ಹತ್ತಿರ ಬರುತ್ತಿದ್ದಂತೆ ತನ್ನ ಉದ್ದನೆಯ ಕಾಲುಗಳನ್ನು ಎತ್ತಿ ಒದೆಯುವಂತೆ ಮಾಡುವ ಜಿರಾಫೆ, ಚಿರತೆಯನ್ನು ಅಟ್ಟಾಡಿಸುತ್ತದೆ. ಒಂದು ಚಿರತೆಯನ್ನು ಓಡಿಸಲು ಹೋದರೆ ಇನ್ನೊಂದು ಚಿರತೆಯು ಜಿರಾಫೆ ಮರಿಯತ್ತ ಧಾವಿಸುತ್ತದೆ. ಮರಿ ಜಿರಾಫೆಯಂತೂ ತಾಯಿಯ ರಕ್ಷೆಗಾಗಿ ಅದರ ಸುತ್ತಲೇ ಸುತ್ತುತ್ತದೆ. ತಾಯಿಯೂ ಅಷ್ಟೇ, ಮರಿಯನ್ನು ಬಿಟ್ಟು ಬಹುದೂರ ಹೋಗುವುದೂ ಇಲ್ಲ. ಅಲ್ಲಲ್ಲೇ ಚಿರತೆಯನ್ನು ಹೆದರಿಸಿ, ಹತ್ತಿರ ಬರದಂತೆ ನೋಡಿಕೊಳ್ಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...