alex Certify ನೋಡಲು ಖುಷಿ ನೀಡುತ್ತೆ ದೇಸಿ ಶೈಲಿಯ ‘ಅವೆಂಜರ್ಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡಲು ಖುಷಿ ನೀಡುತ್ತೆ ದೇಸಿ ಶೈಲಿಯ ‘ಅವೆಂಜರ್ಸ್’

ಮಾರ್ವಲ್ ಸ್ಟುಡಿಯೋಸ್ ನ ಹಾಲಿವುಡ್ ಸಿನಿಮಾವೀಗ ದೇಸಿ ಶೈಲಿಯಲ್ಲಿ ಮೂಡಿಬಂದಿದ್ದು, ಟ್ವಿಟ್ಟರ್ ನಲ್ಲಿ ಇದರ ವಿಡಿಯೋ ಬಿಡುಗಡೆ ಆಗಿದೆ.

ಒಂದು ಕಾಲದಲ್ಲಿ ಎಲ್ಲರನ್ನು ಸೆಳೆದಿದ್ದ ಅವೆಂಜರ್ಸ್ ಸಿನಿಮಾದಲ್ಲಿನ ಪಾತ್ರಗಳು ಇಂದಿಗೂ ಸೆಳೆಯುತ್ತಲೇ ಇವೆ. ಆ ದಿನಗಳನ್ನು ಸ್ಮರಿಸಿ ಒಂದಿಷ್ಟು ಹುಡುಗರು ಅವೆಂಜರ್ಸ್ ಪಾತ್ರಗಳನ್ನು ತಮ್ಮದೇ ಶೈಲಿಯಲ್ಲಿ ತರಲು ಪ್ರಯತ್ನಿಸಿದ್ದಾರೆ.

ಕೊಳದೊಳಗೆ ಈಜುತ್ತಿದ್ದ ಯುವಕರ ಪಡೆ, ಒಬ್ಬೊಬ್ಬರಾಗಿಯೇ ಬಾವಿಯೊಳಗಿಂದ ಮೇಲೆದ್ದು ಬಂದಂತೆ ವಿಡಿಯೋ ಚಿತ್ರೀಕರಿಸಿದ್ದು, ಹೀಗೆ ಒಟ್ಟು ಆರು ಹುಡುಗರು ನೀರಿನೊಳಗಿಂದ ಬಾವಿಕಟ್ಟೆ ಮೇಲೆ ಎಗರಿ ಸಾಲಾಗಿ ನಿಲ್ಲುತ್ತಾರೆ.

ಒಬ್ಬನ ಕೈಯಲ್ಲಿ ಶೀಲ್ಡ್ ಬದಲು ಟೈರ್, ಮತ್ತೊಬ್ಬನ ಕೈಯಲ್ಲಿ ಕಬ್ಬಿನಿಂದ ತಯಾರಿಸಿದ ಬಿಲ್ಲು ಹಿಡಿದು ಎದೆ ಸೆಟಿಸಿ ನಿಲ್ಲುವ ಹುಡುಗರು, ಒಂದು ಕ್ಷಣ ಅವೆಂಜರ್ಸ್ ಚಿತ್ರವನ್ನು ಕಣ್ಮುಂದೆ ತಂದುಬಿಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...