alex Certify ಆಸ್ಪತ್ರೆಯಲ್ಲಿದ್ದ PPE ಕಿಟ್‌ ಕದ್ದವನಿಗೀಗ ಕೊರೊನಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಲ್ಲಿದ್ದ PPE ಕಿಟ್‌ ಕದ್ದವನಿಗೀಗ ಕೊರೊನಾ….!

Man Steals PPE Kit from Nagpur Hospital Thinking it is a Raincoat ...

ಕೊರೊನಾ ಶುರುವಾದ ಬಳಿಕ ಒಂದಿಲ್ಲೊಂದು ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇದೆ. ಇದೀಗ ನಾಗ್ಪುರದಲ್ಲಿ ವ್ಯಕ್ತಿಯೊಬ್ಬ ರೇನ್ ‌ಕೋಟ್‌ ಎಂದು ಕೊಂಡು ಆಸ್ಪತ್ರೆಯಲ್ಲಿದ್ದ ಪಿಪಿಇ ಕಿಟ್‌ ಅನ್ನು ಕದ್ದುಕೊಂಡ ಹೋಗಿದ್ದು, ಇದೀಗ ಆ ವ್ಯಕ್ತಿಗೆ ಕೊರೊನಾ ಪಾಸಿಟಿವ್‌ ಆಗಿದೆ.

ಹೌದು, ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಮೇಯೋ ಆಸ್ಪತ್ರೆಗೆ ಕುಡಿದು ವ್ಯಕ್ತಿಯೊಬ್ಬ ಕೆಲ ದಿನಗಳ ಹಿಂದೆ ಬಂದಿದ್ದ. ಆ ವ್ಯಕ್ತಿಗೆ ಕೆಲ ಗಾಯಗಳು ಆಗಿದ್ದವು. ಬಳಿಕ ಚಿಕಿತ್ಸೆ ಪಡೆದು ಮನೆಗೆ ಹೋಗುವಾಗ ಆಸ್ಪತ್ರೆಯಲ್ಲಿ ಬಿಸಾಕಿದ್ದ ಪಿಪಿಇ ಕಿಟ್‌ ಅನ್ನು ಕದ್ದುಕೊಂಡು ಹೋಗಿದ್ದಾನೆ. ಈ ರೀತಿ ಕಳುವು ಮಾಡಿಕೊಂಡು ಹೋದ ಕಿಟ್‌ ಅನ್ನು ರೇನ್‌ ಕೋಟ್‌ ಎಂದಿರುವ ವ್ಯಕ್ತಿ, ಅದನ್ನು ಸಾವಿರ ರೂಪಾಯಿಗೆ ಖರೀದಿಸಿರುವುದಾಗಿ ಹೇಳಿಕೊಂಡಿದ್ದಾನೆ.

ತರಕಾರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮಾತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಪರಿಶೀಲಿಸಿದಾಗ ಇದು ಪಿಪಿಇ ಕಿಟ್‌ ಎನ್ನುವುದು ಸಾಬೀತಾಗಿದೆ. ಬಳಿಕ ಆರೋಗ್ಯ ಸಿಬ್ಬಂದಿಗಳು ಬಂದು ಪಿಪಿಇ ಕಿಟ್‌ ಸುಟ್ಟು ಹಾಕಿ, ವ್ಯಕ್ತಿಗೆ ಕೊರೊನಾ ಟೆಸ್ಟ್‌ ಮಾಡಿಸಿದಾಗ, ಪಾಸಿಟಿವ್‌ ಬಂದಿದೆ. ಆದರೆ ಆತನ ಕುಟುಂಬ ಸದಸ್ಯರಿಗೆ ನೆಗೆಟಿವ್‌ ಬಂದಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...