alex Certify ಕೇವಲ 30 ಸೆಕೆಂಡ್ ನಲ್ಲಿ 10 ಲಕ್ಷ ಎಗರಿಸಿದ ಹತ್ತು ವರ್ಷದ ಬಾಲಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 30 ಸೆಕೆಂಡ್ ನಲ್ಲಿ 10 ಲಕ್ಷ ಎಗರಿಸಿದ ಹತ್ತು ವರ್ಷದ ಬಾಲಕ…!

ಕೇವಲ ಹತ್ತು ವರ್ಷದ ಬಾಲಕನೊಬ್ಬ 10 ಲಕ್ಷ ರೂಪಾಯಿಯನ್ನು ಬ್ಯಾಂಕಿನಿಂದ ಎಗರಿಸಿದ ವಿಚಿತ್ರ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ.

ನೀಮುಚ್ ಜಿಲ್ಲೆಯ ಜವಾದ ಪ್ರದೇಶದಲ್ಲಿ ಘಟನೆ ನಡೆದಿದ್ದು, ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಚಿಂದಿ ಬಟ್ಟೆಗಳನ್ನು ಧರಿಸಿದ್ದ ಬಾಲಕ ಬ್ಯಾಂಕ್ ಒಳಗೆ ಪ್ರವೇಶಿಸಿ ಕ್ಷಣಮಾತ್ರದಲ್ಲಿ ಕಳ್ಳತನ ಮಾಡುವುದು ಕಂಡುಬಂದಿದೆ.

11 ಗಂಟೆಗೆ ಕೋ-ಆಪರೇಟಿವ್ ಬ್ಯಾಂಕ್ ಒಳಗೆ ಪ್ರವೇಶಿಸುವ ಬಾಲಕ ಕ್ಯಾಶಿಯರ್ ಕೌಂಟರ್ ಒಳಗೆ ನುಗ್ಗಿ ಐನೂರು ನೋಟಿನ ‌ಕಂತೆ ಎತ್ತಿಕೊಂಡು ಹೊರಗೆ ಓಡಿಬಿಡುತ್ತಾನೆ.

ಬ್ಯಾಂಕಿನ ಗ್ರಾಹಕರು ಮತ್ತು ಸಿಬ್ಬಂದಿ ಗಮನಿಸುತ್ತಿದ್ದಂತೆ ಆತ ಹಣದೊಂದಿಗೆ ಹೊರಗೆ ಓಡಿಬಿಡುತ್ತಾನೆ. ಈ ಬಾಲಕನನ್ನು 20 ವರ್ಷದ ವ್ಯಕ್ತಿಯೊಬ್ಬ ಹೊರಗಿನಿಂದ ನಿಯಂತ್ರಿಸುತ್ತಿದ್ದ ಎಂಬುದು ಸಹ ಪೊಲೀಸರ ಗಮನಕ್ಕೆ ಬಂದಿದೆ. ಇದೀಗ ಪೊಲೀಸರು ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...