alex Certify ಆನೆ ಆಹಾರ ತಿನ್ನುವುದನ್ನೇ ಬಿಟ್ಟಕಣ್ಣು ಬಿಟ್ಟಂತೆ ವೀಕ್ಷಿಸಿದ ಚಿರತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆ ಆಹಾರ ತಿನ್ನುವುದನ್ನೇ ಬಿಟ್ಟಕಣ್ಣು ಬಿಟ್ಟಂತೆ ವೀಕ್ಷಿಸಿದ ಚಿರತೆ

ಚಿರತೆಯೊಂದು ಬೃಹತ್ ಆನೆಯನ್ನು ನೋಡಿ ಆನಂದಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಸೋಮವಾರ ಬೆಳಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದು, “ಎಲ್ಲರೂ ಬೃಹತ್ ಆನೆ ನೋಡಲು ಇಷ್ಟಪಡುತ್ತಾರೆ” ಎಂದು ಕ್ಯಾಪ್ಶನ್ ನೀಡಿದ್ದಾರೆ.

ವಿಡಿಯೋವನ್ನು ಆ. 3 ರ ರಾತ್ರಿ ಹೊತ್ತಿಗೆ 20 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.‌ 300ರಷ್ಟು ರೀ ಟ್ವೀಟ್ ಆಗಿದ್ದು, 2 ಸಾವಿರದಷ್ಟು ಲೈಕ್ ಗಳು ಬಂದಿವೆ.

ಈ ಆಸಕ್ತಿದಾಯಕ ವಿಡಿಯೋದಲ್ಲಿ ಚಿರತೆ ದೊಡ್ಡ ಕಲ್ಲು ಬಂಡೆಯ ಮೇಲೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದೆ. ಆನೆಯೊಂದು ಅದರ ತೀರ ಹತ್ತಿರ ಬಂದು ತನ್ನಷ್ಟಕ್ಕೆ ತಾನು ಆಹಾರ ತಿಂದು ಮುಂದೆ ಹೋಗುತ್ತದೆ. ಚಿರತೆ ಅದನ್ನು ಆಸಕ್ತಿಯಿಂದ ವೀಕ್ಷಿಸುವಂತೆ ಕಾಣುತ್ತದೆ.

ಚಿರತೆ ಬಹಳ ಚಾಲಾಕಿನ ಪ್ರಾಣಿಯಾಗಿದ್ದು, ಎಂಥ ಅಪಾಯದಿಂದ ಬೇಕಾದರೂ ತಪ್ಪಿಸಿಕೊಳ್ಳಬಹುದು. ಸ್ವತಃ ಅಷ್ಟೇ ಅಪಾಯಕಾರಿ ಕೂಡ. ಆನೆ ಹಾಗೂ ಚಿರತೆಯನ್ನು ಒಂದು ಫ್ರೇಮ್ ನಲ್ಲಿಟ್ಟರೆ, ಚಿರತೆಯೂ ಆನೆಯಷ್ಟೇ ಬಲಿಷ್ಠ ಎನಿಸುತ್ತದೆ. ಇದರಿಂದ ಈ ವಿಡಿಯೋ ಹೆಚ್ಚು ಮಹತ್ವ ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...