alex Certify ನಷ್ಟ ಸರಿದೂಗಿಸಲು ಹಾಲು ಮಾರಾಟಕ್ಕೆ ಮುಂದಾದ ಶಿಕ್ಷಣ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಷ್ಟ ಸರಿದೂಗಿಸಲು ಹಾಲು ಮಾರಾಟಕ್ಕೆ ಮುಂದಾದ ಶಿಕ್ಷಣ ಸಂಸ್ಥೆ

ಕೊರೊನಾ ವೈರಸ್​ನಿಂದಾಗಿ ದೇಶದ ಅನೇಕ ರಾಜ್ಯಗಳಲ್ಲಿ ಶಾಲೆಯೇ ಪುನಾರಂಭವಾಗಿಲ್ಲ. ಇನ್ನು ಕೆಲ ರಾಜ್ಯಗಳಲ್ಲಿ ಆಯ್ದ ತರಗತಿಗಳಿಗೆ ಶಿಕ್ಷಣ ನೀಡಲಾಗ್ತಿದೆ. ಆದರೆ ಜಾರ್ಖಂಡ್​​ನ ಬೋರ್ಡಿಂಗ್​ ಶಾಲೆಗಳು ಮಾತ್ರ ಕೊರೊನಾದಿಂದಾಗಿ ಉಂಟಾದ ನಷ್ಟದಿಂದ ಪಾರಾಗಲು ಹೊಸ ಮಾರ್ಗ ಹುಡುಕಿವೆ.

ಜಾರ್ಖಂಡ್​​ನ ಕೆಲ ಪ್ರತಿಷ್ಠಿತ ಶಾಲೆಗಳು ತಮ್ಮದೇ ಆದ ಹಸುಗಳು ಹಾಗೂ ಕುದುರೆಗಳನ್ನ ಹೊಂದಿವೆ. ಹಾಲು ಸರಬರಾಜು ಉದ್ಯಮಕ್ಕಾಗಿ ಹಾಗೂ ಸವಾರಿಗಾಗಿ ಈ ಪ್ರಾಣಿಗಳನ್ನ ಇರಿಸಲಾಗಿದೆ. ಆದರೆ ಈ ಬಾರಿ ಕೊರೊನಾದಿಂದಾಗಿ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ.

ಹೀಗಾಗಿ ಈ ನಷ್ಟವನ್ನ ಸರಿದೂಗಿಸುವ ಸಲುವಾಗಿ ರಾಂಚಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನಿವಾಸಿಗಳಿಗೆ ವಿಕಾಸ್​ ವಿದ್ಯಾಲಯ ಹಾಲು ಮಾರಾಟ ಮಾಡುತ್ತಿವೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿದೆ.

175 ಎಕರೆ ಪ್ರದೇಶದಲ್ಲಿರುವ ವಿಕಾಸ್​ ವಿದ್ಯಾಲಯ ರಾಜ್ಯದ ಅತ್ಯಂತ ಹಳೆಯ ವಸತಿ ಶಾಲೆಯಾಗಿದೆ. 300 ವಿದ್ಯಾರ್ಥಿಗಳು ವಸತಿ ಶಾಲೆಯಲ್ಲೇ ಇದ್ದಾರೆ. ಇಲ್ಲಿ 120 ಹಸುಗಳನ್ನ ಸಾಕಲಾಗಿತ್ತು. ಹಾಗೂ ಅವು ದಿನಕ್ಕೆ 350 ಲೀಟರ್​ ಹಾಲನ್ನ ನೀಡುತ್ತಿದ್ದವು. ಆದರೆ ಲಾಕ್​ಡೌನ್​ ಸಮಯದಲ್ಲಿ ಉಂಟಾದ ಮೇವಿನ ಕೊರತೆಯಿಂದಾಗಿ 7 ಹಸುಗಳು ಅಸುನೀಗಿವೆ.

ಶಿಕ್ಷಣ ಸಂಸ್ಥೆಗೆ ಉಂಟಾಗುವ ನಷ್ಟ ಕಡಿಮೆ ಮಾಡಿಕೊಳ್ಳಲು ಹಾಲು ಮಾರಾಟ ಮಾಡಲು ಆರಂಭಿಸಿದ್ದಾರೆ. ಮೊದಲು ಈ ಹಾಲಿನಿಂದ ತುಪ್ಪ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...