alex Certify ಜಮ್ಮುವಿನಲ್ಲಿದೆ ಅಪರೂಪದ ವರ್ಟಿಕಲ್ ಗಾರ್ಡನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಮ್ಮುವಿನಲ್ಲಿದೆ ಅಪರೂಪದ ವರ್ಟಿಕಲ್ ಗಾರ್ಡನ್

Jammu Teacher Creates Vertical Gardens Using Plastic Bottles to Make Earth a Better Place

ಜಮ್ಮು: ಪ್ಲಾಸ್ಟಿಕ್ ಅನ್ನು ಪರಿಸರದ ಅತ್ಯಂತ ದೊಡ್ಡ ವೈರಿ ಎಂದು ಕರೆಯಲಾಗುತ್ತದೆ. ಆದರೆ ಜಮ್ಮುವಿನ ಶಿಕ್ಷಕಿಯೊಬ್ಬರು ತಮ್ಮ ಕ್ರಿಯಾಶೀಲತೆಯಿಂದ ಅದನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.

ಡಾ. ನಾಜಿಯಾ ರಸೂಲ್ ಲತೀಫ್ ಅವರು ಹಳೆಯ ಪ್ಲಾಸ್ಟಿಕ್ ಬಾಟಲಿಗಳನ್ನು ಕುಂಡದಂತೆ ಬಳಸಿಕೊಂಡು ಲಂಬಾಕೃತಿಯ ಗೋಡೆ ಗಾರ್ಡನ್ ಸಿದ್ಧ ಮಾಡಿದ್ದಾರೆ. ಈ ಗಾರ್ಡನ್ ಅವರ ಒತ್ತಡವನ್ನು ಕಡಿಮೆ ಮಾಡುವ ಜತೆಗೆ ನಗರದ ಸೌಂದರ್ಯವನ್ನು ಹೆಚ್ಚಿಸಿದೆ.

ಲಂಬಾಕೃತಿಯ ಉದ್ಯಾನ ಅತ್ಯಂತ ಸುಂದರ ಕಾಣುವುದು, ಪರಿಸರವನ್ನು ಆಹ್ಲಾದಕರವಾಗಿಡುವುದು ಮಾತ್ರವಲ್ಲ. ಕಡಿಮೆ ನೀರಿನಲ್ಲಿ ಬೆಳೆಯುತ್ತದೆ.

ಒಂದು ಸೆಮಿನಾರ್ ನಲ್ಲಿ ಭಾಗವಹಿಸಿದ ನಂತರ ಲತೀಫ್ ಅವರಿಗೆ ಈ ಉಪಾಯ ಹೊಳೆದಿತ್ತು. ಅವರು ಮೊದಲು ತಾವು ಕೆಲಸ ಮಾಡುವ ಗಾಂಧಿ ನಗರದ ಸರ್ಕಾರಿ ಮಹಿಳಾ ಕಾಲೇಜ್ ನಲ್ಲಿ ಲಂಭವಾದ ಗಾರ್ಡನ್ ಬೆಳೆಸಿದರು. ನಂತರ ಸರ್ಕಾರಿ ಪೊಲೀಸ್ ಶಾಲೆಯಲ್ಲಿ ಹಾಗೆಯೇ ಜಮ್ಮು ವಿಶ್ವ ವಿದ್ಯಾಲಯದಲ್ಲೂ ಈ ಉದ್ಯಾನ ಬೆಳೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...