alex Certify ಕೊರೊನಾ ಲಸಿಕೆ ಕುರಿತು 97 ವರ್ಷದ ವೃದ್ದೆ ಹೇಳಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಕುರಿತು 97 ವರ್ಷದ ವೃದ್ದೆ ಹೇಳಿದ್ದೇನು ಗೊತ್ತಾ…?

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್‌ಗಳು ಅದೆಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಮುಖ್ಯವಾದದ್ದು ಲಸಿಕೆಗಳು. ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಅಕ್ಕಪಕ್ಕದವರನ್ನೂ ರಕ್ಷಿಸಲೆಂದು ಜನರು ಮುಂದಾಗಿದ್ದಾರೆ.

ಇಂಥ ಸಂದರ್ಭದಲ್ಲೂ ಸಹ ಅನೇಕ ಮಂದಿಗೆ ಲಸಿಕೆಗಳ ಮೇಲಿನ ಅನುಮಾನ ಇನ್ನೂ ಹೋಗಿಲ್ಲ. ಇಂತ ಅನುಮಾನಗಳನ್ನು ಹೊಡೆದೋಡಿಸುವ ನಿಟ್ಟಿನಲ್ಲಿ 97 ವರ್ಷ ವಯಸ್ಸಿನ ಮಹಿಳೆಯೊಬ್ಬರು ಲಸಿಕೆ ತೆಗೆದುಕೊಳ್ಳುವ ಮಹತ್ವದ ಕುರಿತಂತೆ ಮಾತನಾಡಿದ್ದಾರೆ.

ಯಂತ್ರದ ಮೂಲಕ ಮಹಿಳೆಯರ ʼತಿಂಗಳʼ ಯಾತನೆ ಅರಿತ ಪುರುಷರು

“ನನಗೆ 97 ವರ್ಷ ವಯಸ್ಸು. ನಾನು ಮಾರ್ಚ್ 9ರಂದು ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿರುವೆ. ನನಗೆ ಯಾವುದೇ ನೋವು ಅಥವಾ ಅಡ್ಡ ಪರಿಣಾಮಗಳು ಆಗಲಿಲ್ಲ. ಈಗ ನನ್ನ ಎರಡನೇ ಡೋಸ್ ಮೇ 9ಕ್ಕೆ ಇದೆ. ಭಯಪಡಬೇಡಿ. ಲಸಿಕೆ ಹಾಕಿಸಿಕೊಳ್ಳಿ. ಇದು ನಿಮಗೆ ಹಾಗೂ ನಿಮ್ಮ ಸುತ್ತಲಿನ ಮಂದಿಗೆ ಒಳ್ಳೆಯದು. ಇದು ಸುರಕ್ಷಿತವಾಗಿದೆ. ನಾನು ಸಾಮಾನ್ಯ ಬದುಕಿನಲ್ಲಿ ಆರಾಮವಾಗಿ ಮುಂದುವರೆಯುತ್ತಿರುವೆ” ಎಂದು ಈ ಹಿರಿಯಜ್ಜಿ ಹೇಳುತ್ತಿರುವ ವಿಡಿಯೋವನ್ನು ಪತ್ರಕರ್ತೆ ಲತಾ ವೆಂಕಟೇಶ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...