alex Certify ಪ್ರಧಾನಿ ಮೋದಿಯವರ ಜೀವನಗಾಥೆ ಸ್ಪೂರ್ತಿಯಿಂದ ಗ್ರಾ.ಪಂ. ಅಧ್ಯಕ್ಷೆಯಾಗಲು ಮುಂದಾದ ʼಚಾಯ್‌ ವಾಲಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿಯವರ ಜೀವನಗಾಥೆ ಸ್ಪೂರ್ತಿಯಿಂದ ಗ್ರಾ.ಪಂ. ಅಧ್ಯಕ್ಷೆಯಾಗಲು ಮುಂದಾದ ʼಚಾಯ್‌ ವಾಲಿʼ

Inspired by PM Modi's Journey, Muzaffarnagar's 'Chaiwali' Contests UP Panchayat Polls

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀವನಗಾಥೆಯಿಂದ ಪ್ರೇರಿತರಾದ ಮಹಿಳೆಯೊಬ್ಬರು ಗ್ರಾಮ ಪಂಚಾಯತ್‌ ಅಧ್ಯಕ್ಷೆಯಾಗುವ ಆಶಯದೊಂದಿಗೆ ಚುನಾವಣೆಗೆ ನಿಲ್ಲುತ್ತಿದ್ದಾರೆ.

ಉತ್ತರ ಪ್ರದೇಶದ ಮುಜಫ್ಫರ್‌ನಗರದ ಮೀನಾಕ್ಷಿ, ತಮ್ಮ ಊರು ಚೋರಾವಾಲಾದಲ್ಲಿ ಗ್ರಾ.ಪಂ. ಚುನಾವಣೆಗೆ ಸ್ಫರ್ಧಿಸುತ್ತಿದ್ದಾರೆ. ಮೀರತ್‌ ವಿವಿಯಲ್ಲಿ ಪದವೀಧರೆಯಾಗಿರುವ ಮೀನಾಕ್ಷಿ ಈ ಊರಿನ ಗ್ಯಾನ್ ಸಿಂಗ್ ಎಂಬವರನ್ನು ವರಿಸಿದ್ದಾರೆ. ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಾದ ಈ ಗ್ರಾ.ಪಂ. ಕ್ಷೇತ್ರದಲ್ಲಿ 7000 ಮತದಾರರಿದ್ದಾರೆ.

ಕಳೆದ ಮೂರು ವರ್ಷಗಳಿಂದ ಚಹಾ ಮಾರುತ್ತಾ ಜೀವನೋಪಾಯ ಕಂಡುಕೊಂಡಿರುವ ಮೀನಾಕ್ಷಿಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಚಹಾ ಅಂಗಡಿಗೆ ಆರ್ಥಿಕ ನೆರವು ನೀಡಲಾಗಿದೆ.

ವಿಚಿತ್ರ ಕಾರಣಕ್ಕೆ ವಿಧಿಸಲಾಗಿದೆ ದಂಡ….! ಈ ಸುದ್ದಿ ಓದಿದ್ರೆ ನೀವೂ ಶಾಕ್‌ ಆಗ್ತೀರಾ…!!

“ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಪ್ರೇರಿತಳಾಗಿದ್ದೇನೆ. ಚಹಾ ಮಾರಿಕೊಂಡು ಇದ್ದ ಅವರು ಪ್ರಧಾನ ಮಂತ್ರಿಯಾಗಬಹುದು ಎಂದರೆ – ’ಚಾಯ್‌ವಾಲಿ’ಯಾದ ನಾನೇಕೆ ಗ್ರಾಮದ ಮುಖ್ಯಸ್ಥೆ ಆಗಬಾರದು?” ಎಂದು ಮೀನಾಕ್ಷಿ ಕೇಳುತ್ತಾರೆ.

ಯಾವುದೇ ರಾಜಕೀಯ ಪಕ್ಷದ ಬೆಂಬಲ ತಮಗೆ ಇಲ್ಲವೆನ್ನುವ ಮೀನಾಕ್ಷಿಗೆ ಗ್ರಾಮ ಮಂದಿಯ ಬೆಂಬಲವೇ ತಮ್ಮನ್ನು ಚುನಾವಣಾ ಕಣಕ್ಕಿಳಿಯಲು ಉತ್ತೇಜನ ಕೊಟ್ಟಿದೆ ಎನ್ನುತ್ತಾರೆ.

ಮೂರು ಮಕ್ಕಳ ತಾಯಿಯಾದ ಮೀನಾಕ್ಷಿ 2015ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗ್ರಾ.ಪಂ. ಅಧ್ಯಕ್ಷೆಯಾಗುವ ಆಶಯ ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...